ಗುಂಡ್ಲುಪೇಟೆ: ಪಟ್ಟಣದ ಶ್ರೀ ಮದ್ದಾನೇಶ್ವರ ಪಬ್ಲಿಕ್ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಣೆ ಮಾಡಲಾಯುತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಎನ್.ನಟರಾಜು, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಮಕ್ಕಳು ಬಾಲ್ಯದಲ್ಲೇ ಪರಿಸರದ ಬಗ್ಗೆ ಹೆಚ್ಚು ಆಶಕ್ತಿ ಹೊಂದಬೇಕು. ಇದರಿಂದ ಹೆಚ್ಚು ಗಿಡನೆಟ್ಟು ಪೋಷಣೆ ಮಾಡಲು ಸಾಧ್ಯ. ಪರಿಸರ ಉತ್ತಮವಾಗಿದ್ದರೆ ಮಾತ್ರಮ ಮನುಷ್ಯ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆ ಹೆಚ್ಚಿನ ಪ್ರಮಾಣದ ಅರಣ್ಯ ಪ್ರದೇಶ ಹೊಂದಿದ್ದರು ಸಹ ಮಳೆ ಪ್ರಮಾಣ ಕಡಿಮೆ. ಹವಾಮಾನದ ವೈಪರಿತ್ಯ ತಡೆಗಟ್ಟಲು ಹೆಚ್ಚೆಚ್ಚು ಗಿಡನೆಡಬೇಕು. ಇದರಿಂದ ಉತ್ತಮ ಗಾಳಿ, ಬೆಳಕು ಸಿಗಲಿದೆ. ಆದ್ದರಿಂದ ಎಲ್ಲರೂ ಪರಿಸರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶಿಕ್ಷಕಿ ಪಲ್ಲವಿ, ನವೀನ, ಅಂಬಿಕಾ, ಲಕ್ಷ್ಮಮ್ಮ, ಗೀತಾ, ಕವಿತಾ, ಆಯಿಷ, ನೌಕರ ವರ್ಗದರಾದ, ಬಿ.ಎಂ.ಮಂಜಪ್ಪ, ಮಹಾದೇವಸ್ವಾಮಿ, ಶಂಕರ್ ನಾಗ್, ರಾಜಶೇಖರ್, ಶಿವಣ್ಣ, ಪ್ರಜ್ವಲ್, ಇಕ್ವಿಟಾಸ್ ಬ್ಯಾಂಕಿನ ನೌಕರರ ಮಹೇಶ್, ಮಹೇಂದ್ರ ಜಯರಾಮ್ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.