ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನಪುರ ಗ್ರಾಮದ ವೆಂಕಟಯ್ಯ ಅವರ ಪುತ್ರ ಗೋವಿಂದರಾಜು(32) ಎಂಬ ಯುವಕ ನಾಪತ್ತೆಯಾಗಿದ್ದಾರೆ.
ವೆಂಕಟಯ್ಯ ಅವರ ಪುತ್ರ ಗೋವಿಂದರಾಜು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಚಿಕಿತ್ಸೆಗೆಂದು 2022ರ ಮೇ.27ರಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ಕ್ಯಾಂಟೀನ್‍ನಲ್ಲಿ ಟಿಫನ್ ಮಾಡಿದ ನಂತರ ನಾಪತ್ತೆಯಾಗಿದ್ದಾರೆ. ವಈ ಕುರಿತು ಗೋವಿಂದರಾಜು ತಂದೆ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ಧಾರೆ.
ಕಾಣೆಯಾದ ಮಲ್ಲಯ್ಯನಪುರ ಗ್ರಾಮದ ಗೋವಿಂದರಾಜು ವಯಸ್ಸು 32 ವರ್ಷ, 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ನಿಳಿ ಬಣ್ಣದ ಟೀ ಶರ್ಟ್, ಬ್ಲೂ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡಬಲ್ಲವನಾಗಿದ್ದಾರೆ. ಮಾಹಿತಿ ದೊರೆತಲ್ಲಿ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮ ಅಥವಾ ಸಿದ್ದಾಪುರ ಪೆÇಲೀಸ್ ಠಾಣೆ ದೂ.ಸಂ-080-22942572, 9480801519 ಸಂಪರ್ಕಿಸುವಂತೆ ಕೋರಲಾಗಿದೆ.