Wednesday, April 9, 2025
Google search engine

Homeರಾಜ್ಯಮಹಾಜನದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳ ಕುರಿತು ಕಾರ್ಯಗಾರ

ಮಹಾಜನದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳ ಕುರಿತು ಕಾರ್ಯಗಾರ

 

ಮೈಸೂರು:ಇಂದು ಮೈಸೂರಿನ ಜಯಲಕ್ಷ್ಮೀಪುರನ ಎಸ್. ಬಿ. ಆರ್. ಆರ್. ಮಹಾಜನ ಕಾಲೇಜಿನ ಇತಿಹಾಸ ವಿಭಾಗ, ವಾಣಿಜ್ಯಶಾಸ್ತ್ರ ವಿಭಾಗ, ಎಂಟ್ರಿ ಟು ಸರ್ವಿಸ್ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಹೇಗೆ ಯಶಸ್ವಿಯಾಗಿ ಎದುರಿಸುವುದು ಎಂಬ ವಿಷಯ ಕುರಿತ ಕಾರ್ಯಗಾರವನ್ನು ಗುರುದೇವ IಂS-ಏಂS ಆಕಾಡೆಮಿ, ಧಾರವಾಡ ಇವರ ಸಂಯುಕ್ತಶ್ರಾಯದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಆರ್. ಜಯಕುಮಾರಿ ಮತ್ತು ಗುರುದೇವ IಂS-ಏಂS ಆಕಾಡೆಮಿಯ ಮಾಸ್ಟರ್ ಟ್ರೇನರ್ ಶ್ರೀ ರವಿ ಬ್ಯಾಹಟ್ಟಿ ಹಾಗೂ ಅಕಾಡೆಮಿಯ ಆಡಳಿತಾಧಿಕಾರಿಗಳಾದ ಶ್ರೀ ಶಂಕರ್ ನೆರೆವೇರಿಸಿದರು.

ನಂತರ ಗುರುದೇವ IಂS-ಏಂS ಆಕಾಡೆಮಿಯ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ತರಬೇತುದಾರಾರಾದ ಶ್ರೀ ರವಿ ಬ್ಯಾಹಟ್ಟಿರವರು ಮಾನವನಿಗೆ ಜೀವನದಲ್ಲಿ ಲೆಕ್ಕಾಚಾರ ಅತಿಮುಖ್ಯ. ಜೀವನದಲ್ಲಿ ಮನುಷ್ಯ ಏನೂ ಮಾಡದೇ ಇರುವುದಕ್ಕಿಂತ, ಏನನ್ನಾದರೂ ಸಾಧಿಸಬೇಕು ಎಂದು ಹೇಳುತ್ತಾ ಕಾರ್ಯಗಾರಕ್ಕೆ ಸಂಬಂಧಪಟ್ಟಂತೆ ಗಣಿತವು ಬರೀ ಪುಸ್ತಕದ ಸಿದ್ದಾಂತವಾಗಿರದೆ ಪ್ರಾಯೋಗಿಕ ವಸ್ತುವಾಗಬೇಕು, ಸ್ಥಿರತೆಯು ಯಶಸ್ಸಿನ ಕೀಲಿಕೈಯಾಗಿದೆ, ಆದರೆ ಈಗಿನ ವಿದ್ಯಾರ್ಥಿಗಳಿಗೆ ಸ್ಥಿರತೆಯು ಕಡಿಮೆಯಾಗಿರುವುದು ಕಂಡುಬರುತ್ತಿರುವುದು ಬಹಳ ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಬಿ. ಆರ್. ಜಯಕುಮಾರಿರವರು ಮನುಷ್ಯ ಜೀವನದಲ್ಲಿ ಸಕರಾತ್ಮಕ ಯೋಚನೆ ಮಾಡುವದನ್ನು ಬೆಳೆಸಿಕೊಳ್ಳಬೇಕು. ಸಕರಾತ್ಮಕತೆಯ ಮನಸ್ಸು ಹೋಗುವ ಹಾಗೆ ಮಾಡಿಕೊಳ್ಳಬೇಕು. ಈ ಸಕರಾತ್ಮಕ ಯೋಚನೆಯಿಂದ ಮಾತ್ರ ದೊಡ್ಡ ದಾರಿ ಸಿಗುತ್ತದೆ. ಸಕರಾತ್ಮಕವಾಗಿದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ. ಆದರೆ ನಕಾರಾತ್ಮಕವಾಗಿದ್ದರೆ ಅಂತ್ಯದ ದಾರಿ ಹಿಡಿದಂತಾಗುತ್ತದೆ. ಸಕರಾತ್ಮಕ ಚಿಂತನೆಯಿಂದ ನಮ್ಮ ಗುರಿಗಳನ್ನು ಸಾಧಿಸಿದ್ದಲ್ಲಿ ಗೆಲುವು ಸಾಧ್ಯ. ಕೇವಲ ಹಣದಿಂದ ಕೆಲಸಗಳನ್ನು ಬಯುಸವುದು ಅಸಾಧ್ಯ. ಹಣವಿದ್ದರೂ ಸ್ಪರ್ಧಾತ್ಮಕ ಜಗತಿನಲ್ಲಿ ಕೌಶಲ್ಯವಿರಬೇಕು, ಅವಕಾಶಗಳಿಗೆ  ಮುಕ್ತವಾಗಿರಬೇಕು, ಸಕರಾತ್ಮಕ ಛಲವಿರಬೇಕು. ಪಡೆಯುವುದಕ್ಕಿಂತ ಪಡೆದಿದ್ದನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಮರ್ಥ್ಯ ತೋರಬೇಕು. ಯಾವ ಮೂಲಗಳಿಂದ ವಿದ್ಯೆ ಹರಿದು ಬಂದರೂ ಅದನ್ನು ಪಡೆಯುವ ಹುರುಪು ವಿದ್ಯಾರ್ಥಿಗೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರೆಪಣಾ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಹೆಚ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೇಜರ್ ನಿಖಿಲ್ ಬಿ ಆರ್ ಮತ್ತು Iಕಿಂಅ ಸಂಯೋಜಕರಾದ ಶ್ರೀಮತಿ ಗೀತಾ ಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ವರ್ಗ ಹಾಗೂ ಅಂತಿಮ ವರ್ಷದ ಅಕಾಂಕ್ಷಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

RELATED ARTICLES
- Advertisment -
Google search engine

Most Popular