ಸರಗೂರು: ಮುಂದಿನ ಪೀಳಿಗೆಗೂ ಪರಿಸರ ಉಳಿಸಿ, ಬೆಳಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಮಹಮದ್ ಅಂಜುಮ್‌ಪಾಷ ಸಲಹೆ
ಮುಂದಿನ ಪೀಳಿಗೆಗೂ ಪರಿಸರ ಉಳಿಸಿ, ಬೆಳಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತರಾಗಬೇಕು ಜೆಎಸ್‌ಎಸ್. ಶಾಲಾ ಮುಖ್ಯ ಶಿಕ್ಷಕರಾದ ಮಹಮದ್ ಅಂಜುಮ್‌ಪಾಷ ಸಲಹೆ ನೀಡಿದರು.
ಪಟ್ಟಣದ ಜೆಎಸ್ ಎಸ್, ಶಾಲಾ ಹಾಗೂ ಕಾಲೇಜು ಆವರಣದಲ್ಲಿ ಸೋಮವಾರ ವಿಶ್ವ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜೆಎಸ್‌ಎಸ್. ಶಿಕ್ಷಣ ಸಂಸ್ಥೆಗಳ ವತಿಯಿಂದ ವಿವಿದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿತ್ಯ ಪರಿಸರ ದಿನವನ್ನು ಆಚರಿಸಬೇಕು. ಆ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಪರಿಸರ ನಾಶಗೊಳಿಸಿದರೆ ಜೀವ ಸಂಕುಲವೂ ನಾಶವಾಗಲಿದೆ. ಚಿಕ್ಕಂದಿನಿಂದಲೇ ಪರಿಸರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರಲ್ಲದೆ ಪರಿಸರದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಶಾಲಾ ಪ್ರೌಡಾಶಾಲ ಮುಖ್ಯ ಶಿಕ್ಷಕರಾದ ಗಂಗಾದರಯ್ಯ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಹಮದ್ ಅಂಜುಮ್‌ಪಾಷ, ಪ್ರಾಂಶುಪಾಲ ಮಹದೇವಸ್ವಾಮಿ, ಕೆ.ವಿ.ಸ್ವಾಮಿ, ಮನೋಜ್, ಸಿದ್ದಲಿಂಗಸ್ವಾಮಿ, ಕಲಾವತಿ, ಶಾಂತಲಾ, ಜಯಲಕ್ಷ್ಮಿ, ಶಿಲಾ, ಶೋಭಾರಾಣಿ, ಆತೋಣಿಮೇರಿ, ಜಯಣ್ಣ, ನಂದಿನಿ, ಶಂಕರ್, ನಟೇಶ್, ವೆಂಕಟೇಶ್, ವಂದನಾ, ಮಹದೇವಸ್ವಾಮಿ, ಕೃಷ್ಣಮೂರ್ತಿ, ಅಶೋಕ್, ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು