ಮೈಸೂರು: ಮೈಸೂರು ಖಿSSUಐಂ ಅಡಿಯಲ್ಲಿ ಟ್ರಾನ್ಸ್ ಫೊರಮಿನಲ್ ಎಂಡೋಸ್ಕೋಪಿಕ್ ಬೆನ್ನುಮೂಳೆ ಚಿಕಿತ್ಸೆ ಸೊಂಟ ಮತ್ತು ಎದೆಗೂಡಿನ ಬೆನ್ನು ಮೂಳೆಯಲ್ಲಿನ ಡಿಸ್ಕ್ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹೊಸ ಮಾದರಿಯ ಸಲಕರಣೆಗಳನ್ನ ಪರಿಚಯಿಸಲಾಗಿದೆ.
ಮೈಸೂರಿನ ಬೃಂದಾವನ ಆಸ್ಪತ್ರೆ ,ಮಿಷನ್ ಸ್ಫೈನ್, ಮೈಸೂರ್ ಆರ್ಥೋ ಪೀಡಿಕ್ ಅಸೋಸಿಯೇಷನ್ ಹಾಗೂ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸಹಯೋಗದಲ್ಲಿ ಖಿSSUಐಂ ಮೈಸೂರು ಮೂರು ದಿನಗಳ ಕಾಲ ಕಾರ್ಯಗಾರ ನಡೆಯಿತು.
ಕಾರ್ಯಕ್ರಮವನ್ನು ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸರವರು ದೀಪಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಡಾ.ಸತೀಶ್ ಚಂದ್ರ ಗೋರೆರವರು ಕಂಡು ಹಿಡಿದಿರುವ ಚಿಕಿತ್ಸೆಗೆ ಬಳಸುವ ಸಲಕರಣೆ, ಹಾಗೂ S೩ಗಿ ಟೆಕ್ನಾಲಜಿ ಕಂಪನಿ ಸಲಕರಣೆಗಳನ್ನು ಬಿಡುಗಡೆ ಮಾಡಿದರು.
ಈ ಕಾರ್ಯಗಾರಕ್ಕೆ ಎಲ್ಲಾ ರಾಜ್ಯ ,ದೇಶ , ಹೊರದೇಶದಿಂದ ವೈದ್ಯರು ಆಗಮಿಸಿ ಬೃಂದಾವನ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಶಸ್ಸ್ತ ಚಿಕಿತ್ಸೆಯ ಲೈವ್ ಆಪರೇಷನ್ ಮೂಲಕ ಕೋರಂ ಹೋಟೇಲ್ ನ ಸಭಾಂಗಣದಲ್ಲಿ ವೀಕ್ಷೀಸಿ ನವೀನ ಮಾದರಿಯ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ.ರವೀಂದ್ರನಾಥ್ ಕೆ, ಡಾ. ಸುನಿಲ್ ನಾಡ್ಕರ್ಣಿ, ಡಾ. ಮಹೇಶ್ ,ಬೃಂದಾವನ ಆಸ್ಪತ್ರೆ ನಿರ್ದೇಶಕರು ಮನೋಜ್ ಮಂದಪ್ಪ ,ಕಂದೇಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.