Saturday, April 19, 2025
Google search engine

Homeಸ್ಥಳೀಯರಾಜ್‌ಕುಮಾರ್ ಸಂವಿಧಾನದ ಆಶಯ ಎತ್ತಿ ಹಿಡಿದವರು

ರಾಜ್‌ಕುಮಾರ್ ಸಂವಿಧಾನದ ಆಶಯ ಎತ್ತಿ ಹಿಡಿದವರು


ಮೈಸೂರು: ಸಂವಿಧಾನದ ವಿಧಿಯೇ ನಮನ್ನು ಕಾಪಾಡಬಲ್ಲ ಶ್ರೀಮಂತ. ಸಿನಿಮಾ ಮೂಲಕ ಜನರ ಕಲ್ಯಾಣ ಮತ್ತು ನೈತಿಕ ಸ್ಥೈರ್ಯ ಹೆಚ್ಚಿಸುವ ತತ್ವಗಳ ಪ್ರಸಾರ ಮಾಡಿದ, ಇತಿಹಾಸದ ತಪ್ಪುಗಳನ್ನೂ ಚಿತ್ರಗಳಲ್ಲಿ ತಿದ್ದಿ ತೀಡಿದ ನಟ ರಾಜ್‌ಕುಮಾರ್ ಸಂವಿಧಾನದ ಆಶಯವನ್ನು ಎತ್ತಿ ಹಿಡಿದವರು ಎಂದು ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ ಹೇಳಿದರು.
ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ರಾಜ್ ಕುಮಾರ್ ಸಾರಕ ಅಂತರ ಕಾಲೇಜು ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿನಿಮಾ ಮೂಲಕ ಸಂವಿಧಾನದ ತತ್ವಗಳನ್ನು ಜನರ ಮನಸ್ಸಿನಲ್ಲಿ ಬೇರೂರಿಸಿದ ಮತ್ತು ಸಂವಿಧಾದ ಆಶಯವನ್ನು ಸಿನೆಮಾಗಳಲ್ಲಿ ಎತ್ತಿ ಹಿಡಿದ ಮೇರುನಟ ಡಾ.ರಾಜ್ ಕುಮಾರ್ ಎಂದು ಹೇಳಿದರು.
ಶಿವಾಜಿ ಗಣೇಶನ್ ಪೃಥ್ವಿರಾಜ್ ಕಪೂರ್ ಅವರಂತಹ ಮೇರು ನಟರಿಗೆ ಕನ್ನಡ ಕಲಿಯಬೇಕು ಎಂಬ ಆಸೆ ಹುಟ್ಟಿಸಿದ ನಟ ರಾಜಕುಮಾರ್, ಅವರ ಬಗ್ಗೆ ಬಗ್ಗೆ ತಿಳಿಯದವರನ್ನು ಕನ್ನಡಿಗರು ಅಥವಾ ಭಾರತೀಯರು ಎಂದು ಪರಿಗಣಿಸುವುದೇ ಕಷ್ಟ ಎಂದು ನುಡಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಎ.ಶ್ರೀಧರ್ ಮಾತನಾಡಿ, ಡಾ.ರಾಜ್ ಒಂದು ವಿಶ್ವವಿದ್ಯಾಲಯದಂತೆ ಬದುಕಿದವರು, ಅಧ್ಯಯನ ಯೋಗ್ಯ ಜೀವನ ನಡೆಸಿದವರು ಎಂದು ಹೇಳಿದರು.
ಲಲಿತಕಲಾ ಕಾಲೇಜಿನ ಅಮೋಘ ಎಂ.ಕಶ್ಯಪ್ ಪ್ರಥಮ ಸ್ಥಾನವನ್ನು ಹಾಸನದ ಎವಿಕೆ ಮಹಿಳಾ ಕಾಲೇಜಿನ ಕೆಟಿ ವಿದ್ಯಾ ದ್ವಿತೀಯ ಸ್ಥಾನ ಹಾಗೂ ಎಚ್.ಎಸ್.ಅಮೃತ ತೃತೀಯ ಸ್ಥಾನ ಪಡೆದರು. ಡಾ.ರಾಜಕುಮಾರ್ ಅಂತರ ಕಾಲೇಜು ಗಾಯನ ಟ್ರೋಫಿಯೂ ಕಾಲೇಜಿಗೆ ದೊರೆಯಿತು.
ಪಿಆರ್‌ಕೆ ಪ್ರೊಡಕ್ಷನ್ ಹಾಗೂ ಪಿಆರ್‌ಕೆ ಆಡಿಯೋ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಿದರು. ತೀರ್ಪುಗಾರರಾಗಿ ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ, ಗಾಯಕ ಪುರುಷೋತ್ತಮ, ವಿದುಷಿ ವೀಣಾ ಎಸ್. ಪಂಡಿತ್ ಆಗಮಿಸಿದ್ದರು. ಕಾಲೇಜು ಆಡಳಿತಾಧಿಕಾರಿ ಪ್ರೊ.ವಿ.ಷಣ್ಮುಗಂ ಕಾರ್ಯಕ್ರಮ ಸಂಚಾಲಕ ಪ್ರೊ.ಸಿ.ಇ.ಲೋಕೇಶ್ ಇದ್ದರು.
ಸ್ಪರ್ಧಾ ವಿಜೇತರು: ಮೈಸೂರು ವಿವಿ ಲಲಿತಕಲಾ ಕಾಲೇಜಿನ ಅಮೋಘ ಎಂ ಕಶ್ಯಪ್ (ಪ್ರಥಮ), ಹಾಸನದ ಎವಿಕೆ ಕಾಲೇಜಿನ ವಿದ್ಯಾ ಕೆ.ಟಿ. (ದ್ವಿತೀಯ), ಅಮೃತಾ ಎಚ್.ಎಸ್. (ತೃತೀಯ) ಸ್ಥಾನಗಳನ್ನು ಪಡೆದರು.

RELATED ARTICLES
- Advertisment -
Google search engine

Most Popular