Friday, April 11, 2025
Google search engine

Homeಸ್ಥಳೀಯರೈತರ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಎಮ್ ಆರ್ ಮಂಜುನಾಥ್ .

ರೈತರ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಎಮ್ ಆರ್ ಮಂಜುನಾಥ್ .

ಹನೂರು : ರೈತರು ನಮ್ಮ ದೇಶದ ಬೆನ್ನೇಲಬು ನಿಮಗೆ ಸರ್ಕಾರದಿಂದ ಅನ್ಯಾಯವಾಗಲು ನಾನು ಬೀಡುವುದಿಲ್ಲ ಸದಾ ನಿಮ್ಮೊಂದಿಗಿರುತ್ತೇನೆ ಇನ್ನು ಮುಂದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿ ಹೆಳುವೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು . ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರುಗಳೊಂದಿಗೆ ಮಾತನಾಡಿದ ಅವರು ಹನೂರು ಭಾಗದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ರೈತರ ಸಮಸ್ಯೆಗಳು ಮತ್ತು ಕಾಡಿನ ಸಮಸ್ಯೆಗಳು ಬಹಳಷ್ಟು ಇರುವುದರಿಂದ ಕ್ರಮೇಣ ಒಂದೊಂದಾಗಿ ಆಯಾ ಭಾಗದಲ್ಲಿ ರೈತರ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಲ್ಲಿಯವರೆಗೆ ಚಂಗಡಿ ಸಮಸ್ಯೆಯನ್ನು ಈ ಬಜೆಟ್ ಅಲ್ಲಿ ಸೇರಿಸಿ ಆ ಸಮಸ್ಯೆಯನ್ನು ಬಗೆಹರಿಸುತ್ತೇನೆ ಮತ್ತು ದನಗಳ ವಿಷಯವಾಗಿ ನಾನು ಸಭೆ ಮಾಡುವವರಿಗೆ ರೈತರಿಗೆ ಅರಣ್ಯ ಅಧಿಕಾರಿಗಳು ಯಾವುದೇ ತೊಂದರೆ ಕೊಡದಂತೆ ನಿರ್ದೇಶನ ಹೇಳುತ್ತೇನೆ ಹಾಗೂ ರೈತರ ಸಹ ಹೊರರಾಜ್ಯದಿಂದ ದನಗಳನ್ನು ತಂದು ಮೇಯಿಸುತ್ತಿದ್ದರೆ ಅದನ್ನು ನಿಲ್ಲಿಸಬೇಕೆಂದು ರೈತರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಜೊತೆಗೆ ದನಗಳ ಸೆನ್ಸೆಸ್ ಮಾಡುವುದಕ್ಕೆ ತೀರ್ಮಾನ ತೆಗೆದುಕೊಳ್ಳೋಣ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರ್ ಪ್ರಕಾಶ್ ,ತಾಲ್ಲೋಕುಅಧ್ಯಕ್ಷ ಚಂಗಡಿ ಕರಿಯಪ್ಪ . ಶಿವಕುಮಾರ್ ಚನ್ನೂರು. ಶಾಂತಕುಮಾರ್.ಮ ಬೆಟ್ಟದ ಮಾದೇಶ್, ಬ ಮಾದೇವ ಬಸವರಾಜ್ ರಾಮಕೃಷ್ಣ ವೀರಣ್ಣ. ಕೌದಳ್ಳಿ ಲೂಯಿಸ್ ಇನ್ನೂ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular