ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್ .ನಗರ : ಅಧಿಕಾರಿಗಳು ಮತ್ತು ಸರ್ಕಾರಿ ನೌಕರರ ವರ್ಗಾವಣೆಗೆಗಾಗಿ ಹಣ ಪಡೆಯುವುದನ್ನೆ ಕಾಯಕ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಯನ್ನೆ ಮರೆತವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಶಾಸಕ ಡಿ.ರವಿಶಂಕರ್ ವಿರುದ್ದ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಮಾಜಿ ಸಚಿವ ಸಾ.ರಾ.ಮಹೇಶ್ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಲಿಗ್ರಾಮ ತಾಲ್ಲೋಕಿನ ಮಾಯಿಗೌಡನಹಳ್ಳಿಯ ಡಿಆರ್ಸಿ ಕಲ್ಯಾಣ ಮಂಟಪದಲ್ಲಿ ಚುಂಚನಕಟ್ಟೆ ಹೋಬಳಿಯ ಜೆಡಿಎಸ್ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಆಯೋಜಿಸಿದ್ದ ತಮ್ಮ ೫೯ನೇ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದು. ರಾಜ್ಯ ಸರ್ಕಾರ ಲಕ್ಷ ಕೋಟಿರೂಗಳಲ್ಲಿ ಸಾಲ ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡದೇ ಅನ್ಯಾಯ ಮಾಡುತ್ತಿದ್ದು ರಾಜ್ಯದ ಪ್ರತಿ ವ್ಯಕ್ತಿ ಮೇಲೆ ೪ಲಕ್ಷಕ್ಕೂ ಅಧಿಕ ಸಾಲ ಮಾಡಿರುವುದೇ ಈಗಿನ ಸಾಧನೆಯಾಗಿದೆ ಓಟು ಹಾಕಿದ ಮತದಾರಿಗೆ ಸೂರು ಕೊಡಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಇದೀಗ ಹಳೇ ಕಾಮಗಾರಿಗಳ ಹೆಸರು ಬದಲಿಸಿ ಮತ್ತೊಮ್ಮೆ ಗುದ್ದಲಿ ಪೂಜೆ ಮಾಡಿಸುತ್ತಿರುವ ಶಾಸಕರ ಕೆಲಸವನ್ನು ಪ್ರಶ್ನಿಸಿದ ಅವರು ಈಗಿನ ಸರ್ಕಾರ ನಾವು ಮಾಡಿದ ರಸ್ತೆಗಳಿಗೆ ಗುಂಡಿ ಮುಚ್ಚಿದರೆ ಸಾಕು ಎಂದು ಜನರೇ ಕೇಳುವಂತಾಗಿರುವುದು ಇವರ ೨ವರ್ಷಗಳ ಸಾಹಸಗಾಥೆಯಾಗಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ನಾಲೆಗಳ ಆಧುನೀಕರಣ,ಏತನೀರಾವರಿ,ವಸತಿಶಾಲೆಗಳು ನಮ್ಮ ಬಹುಮುಖ್ಯ ಕಾರ್ಯಕ್ರಮಗಳಾಗಿದ್ದು ಆದರೆ ಈಗಿನ ಆಡಳಿತ ಮಾಡುವವರು ಕ್ಷೇತ್ರದ ಅಭಿವೃದ್ದಿಯ ಕಲ್ಪನೆಯನ್ನು ಮರೆತಂತೆ ವರ್ತಿಸುತ್ತರುವುದು ಬೇಸರದ ಸಂಗತಿಯಾಗಿದ್ದು ತಮ್ಮದೇ ಸರ್ಕಾರವೇ ಇದ್ದು ಅಭಿವೃದ್ದಿಗೆ ಮುಂದಾಗಲಿ ಎಂದರು. ಈ ಬಾರಿಯ ಜನರ ತಿರ್ಮಾನಕ್ಕೆ ಬದ್ದನಾಗಿ ನಾನು ವೈಯುಕ್ತಿಕವಾಗಿ ರಾಜಕೀಯಕ್ಕೆ ಅಲ್ಪವಿರಾಮ ನೀಡಿದ್ದೇನೆ ಹೊರತು ರಾಜಕೀಯದಿಂದ ನಾನು ದೂರವಾಗಿಲ್ಲ ಕ್ಷೇತ್ರದ ಅವ್ಯವಸ್ಥಿತ ಆಡಳಿತದಿಂದ ಜನತೆ ಮನನೊಂದು ಹೋಗಿದ್ದು ತಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದರೇ ತಾವು ಎಂದಿಗೂ ಸಹಿಸುವುದಿಲ್ಲ ಎಂದು ಗುಡುಗಿದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೇಕ್ ಕತ್ತರಿಸಿ ಅಭಿಮಾನಿಗಳು ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರಾದ ಹಳಿಯೂರುಮಧುಚಂದ್ರ, ಕೆಗ್ಗರೆ ಕುಚೇಲ್,ಲ ಪಿರಿಯಾಪಟ್ಟಣ ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು ಕುಚೇಲ್, ಹಳಿಯೂರು ಗ್ರಾ.ಪಂ.ಅಧ್ಯಕ್ಷೆ ರೇಖಾಜಗದೀಶ್, ಮಾಜಿ ಅಧ್ಯಕ್ಷ ಚಂದ್ರಪ್ಪ, ಮಾಜಿ ಉಪಾಧ್ಯಕ್ಷರಾದ ಹಳಿಯೂರುಕೃಷ್ಣಮೂರ್ತಿ, ದಮ್ಮನಹಳ್ಳಿ ಜಗದೀಶ್, ಸದಸ್ಯ ಸಿ.ಬಿ.ಧರ್ಮ, ಕಗ್ಗಳ ಜ್ಯೋತಿಈರಣ್ಣ , ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ್ ಮಧು, ಪುರಸಭೆ ಮಾಜಿ ಸದಸ್ಸ ಕುಮಾರ್, ಮಾಜಿ ಅಧ್ಯಕ್ಷ ಹೆಬ್ಬಾಳು ಸುಜಯ್, ಹೊಸೂರು ಸೊಸೈಟಿ ಅಧ್ಯಕ್ಷ ಎಚ್.ಎಸ್. ಜಗದೀಶ್ ನಿರ್ದೇಶಕ ಶ್ರೀಧರ್, ವಕೀಲ ತಿಮ್ಮಪ್ಪ, ಎಪಿಎಂಸಿ ಮಾಜಿ ಸದಸ್ಸರಾದ ಬಂಡಹಳ್ಳಿ ಕುಚೇಲ್, ಹೊಸೂರು ಅನಿಲ್, ಉದ್ಯಮಿ ಹೆಬ್ಬಾಳು ಕೋಳಿರಾಜು ಸಾ.ರಾ.ಅಭಿಮಾನಿ ಬಳಗದ ಅಧ್ಯಕ್ಷ ದಮ್ಮನಹಳ್ಳಿ ಕೊಪ್ಪಲು ಧರ್ಮಕುಮಾರ್,ಮಂಜುನಾಥ್, ಮುಖಂಡರಾದ ಜಗದೀಶ್ ಮಾಸ್ಟರ್, ಹಾಡ್ಯ ಮಹೇಶ್, ಮಾಯಿಗೌಡನಹಳ್ಳಿ ಚೆಲುವಣ್ಣ ಪಣಿ,ಶಿವರಾಜ್, ಹನಸೋಗೆ ರಾಜೇಶ್, ಹನಸೋಗೆ ಹರೀಶ್, ಚಿಕ್ಕಹನಸೊಗೆ ದೊರೆ, ಚನ್ನಂಗರೆ ಮಲ್ಲಿಕಾರ್ಜುನ್, ದೊಡ್ಡಕೊಪ್ಪಲು ಮಹೇಶ್, ಗಡಿಯಾಕಾಂತ, ಡಿ.ಕೆ.ಅಭಿ, ಗೊಲ್ಲರಕೊಪ್ಪಲು ಹರೀಶ್, ಹಾಡ್ಯ ಪಟೇಲ್ ಮಂಜು, ಶಂಕರ್, ತ್ರಿಜೇಂದ್ರ, ಹೋರಿ ಮಹದೇವ್, ಶಿವಣ್ಣ, ಮಂಜು ಅರಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.
