Friday, April 11, 2025
Google search engine

Homeಬ್ರೇಕಿಂಗ್ ನ್ಯೂಸ್ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ನೀಡಿ: ಶಾಸಕ ಜಿ.ಡಿ.ಹರೀಶ್ ಗೌಡ

ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ನೀಡಿ: ಶಾಸಕ ಜಿ.ಡಿ.ಹರೀಶ್ ಗೌಡ


ಹನಗೋಡು: ಸರ್ಕಾರಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರಾರ್ಥಮಿಕ ಹಂತದಲ್ಲೇ ಕೌಶಲ್ಯ ತರಬೇತಿ ಶಿಕ್ಷಣ ನೀಡುವುದರೊಂದಿಗೆ ಅವರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.
ಹನಗೋಡಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಚೈತನ್ಯ ಸಭಾಭವನ (ಆಡಿಟೋರಿಯಂ) ವನ್ನು ಶುಕ್ರವಾರದಂದು ಉದ್ಘಾಟನೆ ಮಾಡಿ ಮಾತನಾಡಿ ಇಂದಿನ ಮಕ್ಕಳಿಗೆ ಕೌಶಲ್ಯ ತರಬೇತಿ ತುಂಬಾ ಅತ್ಯವಶ್ಯವಾಗಿದೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಹಂತದಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತವೆ. ಅದೇ ರೀತಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿಯೂ ಇಂಗ್ಲೀಷ್ ಭಾಷೆಗೆ ಒತ್ತು ನೀಡುವುದರೊಂದಿಗೆ ಕೌಶಲ್ಯ ತರಬೇತಿಯನ್ನು ಪ್ರಾಥಮಿಕ ಹಂತದಲ್ಲೇ ನೀಡಬೇಕು.
ರಾಜ್ಯದಲ್ಲಿ ಪ್ರತಿವರ್ಷ ಒಂದು ಲಕ್ಷದ ಮೂವತ್ತೈದು ಸಾವಿರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪದವಿ ಪಡೆದ ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲು ಸಾಧ್ಯವಿಲ್ಲ, ಆದ್ದರಿಂದ ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ನೀಡಿ ಪೋತ್ಸಾಹಿಸುವುದರೊಂದಿಗೆ ಮುಂದೆ ಅವರು ಸ್ವ ಉದ್ಯೋಗ ಸೇರಿದಂತೆ ಇತರೆ ಸ್ವಂತ ಬಲದ ಮೇಲೆ ಜೀವನ ರೂಪಿಸಿಕೊಳ್ಳಲು ಶಕ್ತರಾಗುವಂತೆ ರೂಪಿಸಬೇಕೆಂದು ತಿಳಿಸಿ ವಿದ್ಯಾರ್ಥಿಗಳು ಕೂಡ ಕೌಶಲ್ಯಾಭಿವೃದ್ಧಿ ಜ್ಞಾನದೊಂದಿಗೆ ಗುಣಮಟ್ಟದ ಶಿಕ್ಷಣ ದತ್ತ ಗಮನಹರಿಸಬೇಕೆಂದು ಕಿವಿಮಾತು ಹೇಳಿ ಗ್ರಾಮಾಂತರದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಸಮಾಜಕ್ಕೆ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ತಂದೆಯ ಅಧಿಕಾರಾವಧಿಯ ಅನುದಾನ: ೨೦೧೮- ೧೯ ನೇ ಸಾಲಿನ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ತಂದೆ ಜಿ.ಟಿ. ದೇವೇಗೌಡರು ಉನ್ನತ ಶಿಕ್ಷಣರಾಗಿದ್ದು ಅಂದು ಹನಗೋಡು ಪದವಿ ಕಾಲೇಜಿಗೆ ಕಾಲೇಜಿನ ಮೇಲಾಂತ್ತಸ್ತು ಕೊಠಡಿಗಳ ನಿರ್ಮಾಣಕ್ಕೆ ಎರಡು ಕೋಟಿ ರೂ ಮತ್ತು ಸಭಾಭವನ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಎರಡು ಕೋಟಿ ರೂ ಸೇರಿದಂತೆ ಒಟ್ಟು ನಾಲ್ಕು ಕೋಟಿ ರೂ ಅನುದಾನ ನೀಡಿದ್ದರು. ಅವರ ಮಗನಾದ ನಾನು ಇಂದು ಹುಣಸೂರಿನ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಸಭಾಭವನವನ್ನು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.

ಕಾಲೇಜನ್ನು ನ್ಯಾಕ್ ಶ್ರೇಣಿಗೆ ಸೇರಿಸಲು ಸಹಕರಿಸಿ: ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಬಸವರಾಜ್ ಪ್ರಸ್ತಾವಿಕ ಮಾತನಾಡಿ
ಇದೇ ಜೂನ್ ೨೨ ಮತ್ತು ೨೩ನೇ ತಾರೀಖಿನಂದು ಹನಗೋಡು ಪದವಿ ಕಾಲೇಜಿಗೆ ನ್ಯಾಕ್ ಸಮಿತಿ ಆಗಮಿಸುತ್ತಿದೆ. ಸಮಿತಿಯು ಕಾಲೇಜಿನ ಶೈಕ್ಷಣಿಕ ಪ್ರಗತಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಲಿದೆ. ಆದ್ದರಿಂದ ಕಾಲೇಜು ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಪೋ?ಕರು ಮತ್ತು ಗ್ರಾಮಸ್ಥರು ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಎಲ್ಲರೂ ಸಹಾಯಾಸ್ತ ನೀಡಬೇಕೆಂಬ ಮನವಿಗೆ ಶಾಸಕ ಜಿಡಿ ಹರೀಶ್ ಗೌಡರು ಕಾಲೇಜು ಉನ್ನತ ಶ್ರೇಣಿ ಪಡೆಯಲು ಎಲ್ಲಾ ರೀತಿಯಲ್ಲೂ ಸಹಕರಿಸುವೆನೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಿರಂಗೂರು ಬಸವರಾಜು, ಹನಗೋಡು ಗ್ರಾ.ಪಂ. ಅಧ್ಯಕ್ಷೆ ರತ್ನಶ್ರೀಧರ್, ಉಪಾಧ್ಯಕ್ಷ ಬೋರೇಗೌಡ, ದೊಡ್ಡ ಹೆಜ್ಜೂರು ಗ್ರಾ. ಪಂ. ಅಧ್ಯಕ್ಷ ಮುದಗನೂರು ಸುಭಾಷ್, ಮಾಜಿ ಅಧ್ಯಕ್ಷ ದಾ.ರಾ. ಮಹೇಶ್, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ರವಿಕುಮಾರ್, ಜಿ.ಪಂ.ಮಾಜಿ ಸದಸ್ಯ ಕಟ್ಟನಾಯಕ, ತಾ.ಪಂ. ಮಾಜಿ ಸದಸ್ಯರಾದ ಎಚ್ ಆರ್ ರಮೇಶ್,ತಟ್ಟೆಕೆರೆ ಶ್ರೀನಿವಾಸ್, ಅಶ್ರಕ್, ರಾಮಚಂದ್ರ ಪಿ ಡಿ ಓ ರಾಮಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಸಿಡಿಸಿ ಸಮಿತಿ ಸದಸ್ಯರುಗಳು, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಪೋಷಕರು ಇದ್ದರು.

RELATED ARTICLES
- Advertisment -
Google search engine

Most Popular