Monday, April 21, 2025
Google search engine

Homeಸ್ಥಳೀಯಶರಣ ದಂಪತಿಗಳಾದ ಧರ್ಮಯ್ಯನ ಹುಂಡಿ ಕುಮಾರ್ ಹಾಗೂ ಮಮತರವರಿಗೆ ಸನ್ಮಾನ

ಶರಣ ದಂಪತಿಗಳಾದ ಧರ್ಮಯ್ಯನ ಹುಂಡಿ ಕುಮಾರ್ ಹಾಗೂ ಮಮತರವರಿಗೆ ಸನ್ಮಾನ


ತಿ.ನರಸೀಪುರ: ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾದ ವಾರ್ಷಿಕೋತ್ಸವ ಹಾಗೂ ವಚನ ಪಿತಾಮಹ ಫ. ಗು. ಹಳಕಟ್ಟಿಯವರ ಲಿಂಗೈಕ್ಯ ಸ್ಮರಣೋತ್ಸವ ಕಾರ್ಯಕ್ರಮ ಪಟ್ಟಣದ ಎ. ಪಿ. ಎಂ. ಸಿ ಮಾರುಕಟ್ಟೆ ಎದುರು ಅಕ್ಕಮಹಾದೇವಿ ಸಹಕಾರ ಸಂಘದ ಅಂಗಳದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ನರಸಿಂಹ ರಾಜಪುರದ ಪೂಜ್ಯ ಶ್ರೀ ಬಸವಯೋಗಿ ಪ್ರಭುಗಳು ಫ. ಗು.ಹಳಕಟ್ಟಿಯವರ ಅವಿರತ ಪರಿಶ್ರಮದಿಂದ ಗೌಣವಾಗಿದ್ದ ಶರಣರ ವಚನ ಸಾಹಿತ್ಯ ವಿಶ್ವಕ್ಕೆ ಪರಿಚಯ ವಾಯಿತು. ಅನೇಕ ಕಾರಣಗಳಿಂದ ಮರೆಯಾಗಿ ಹೋಗಿದ್ದ ಹನ್ನೆರಡನೇಯ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಶೋಧಿಸಿ ಮುದ್ರಿಸಿ ವಿಶ್ವಕ್ಕೆ ತಲುಪಿಸಿದ್ದಿ ವಚನ ಪಿತಾಮಹ ಫ. ಗು. ಹಳಕಟ್ಟಿಯವರು.
ಎಂದರು.
ಮಠ ಮಂದಿರ ಭಕ್ತರ ಮನೆಯಲ್ಲಿ ಪೂಜಿಸಲ್ಪಡುತ್ತಿದ್ದ ವಚನದ ಕಟ್ಟುಗಳನ್ನು ತೆಗೆದು ಸಂಗ್ರಹಿಸಿದ ಮಹಾಶಕ್ತಿ ಹಳಕಟ್ಟಿಯವರು ಮನಸ್ಸು ಮಾಡಿದ್ದರೆ ಹಣ ಮನೆ ಎಲ್ಲವನ್ನೂ ಸಂಪಾದನೆ ಮಾಡಬಹುದಿತ್ತು. ಆದರೆ ಹಳಕಟ್ಟಿಯವರು ಮಾಡಿದ್ದು ವಚನಗಳ ಸಂಪಾದನೆ ವಚನಗಳ ಸಂಗ್ರಹ ಮಾತ್ರ, ಮಗ ಚಂದ್ರಶೇಖರ ಲಿಂಗೈಕ್ಯವಾದಾಗಲೂ ಕೂಡ ಚಿಂತೆ ಮಾಡದೇ ಶಿವನ ಸ್ವತ್ತು ಶಿವನಿಗೆ ಸೇರಿದ್ದು ಎಂಬ ಭಾವದಿಂದ ವಚನ ಸಾಹಿತ್ಯ ಸೇವೆಯಲ್ಲಿ ಮಗ್ನರಾಗಿದ್ದರು ಎಂದರು.
ಫ. ಗು. ಹಳಕಟ್ಟಿಯವರು ತಾವಿದ್ದ ಮನೆ ಮಾರಾಟ ಮಾಡಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿ ವಚನ ಸಾಹಿತ್ಯ ಉಳಿಸಿ ಬೆಳೆಸಿದ ಮಹಾ ಶರಣರು ಸ್ವತಂತ್ರ ಧರ್ಮಕ್ಕಾಗಿ ಬಸವಾದಿ ಶರಣರ ಸ್ವತಂತ್ರ ವಿಚಾರಗಳನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಶ್ರಮಿಸಿದರು.
ಶರಣ ದಂಪತಿಗಳಾದ ಧರ್ಮಯ್ಯನ ಹುಂಡಿ ಕುಮಾರ್ ಮಮತರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹದೇವಪ್ಪ,ತಾಲೂಕು ಅಧ್ಯಕ್ಷ ಶಿವಪ್ರಸಾದ್ , ತುಂಬಲ ಬಸವಣ್ಣ, ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪದಾಧಿಕಾರಿಗಳು ಬಸವ ಭಕ್ತರು. ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular