ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ನೂತನ ಜನಪ್ರಿಯ ಶಾಸಕರಾದ ಪಿ. ರವಿಕುಮಾರ್ ಗೌಡ ರವರ ನೂತನ ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ರಾಷ್ಟೀಯ ಬಸವ ದಳದ ವತಿಯಿಂದ ಜಿಲ್ಲಾಧ್ಯಕ್ಷ ಕಾಂಗ್ರೆಸ್ ಮುಖಂಡ ವಕೀಲ ಎಂ. ಗುರುಪ್ರಸಾದ್ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಂತರ ಮನವಿ ನೀಡಿ ಮಂಡ್ಯ ನಗರದ ಹಲವಾರು ಹೋಟಲ್, ಬೀದಿ ಬದಿ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಕಪ್ಪಿನಿಂದ ಕಾಫಿ ಟೀ ಸರಬರಾಜು ಮಾಡುತ್ತಿದ್ದು ಇದರಿಂದ ಜನಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಹಾಗೂ ಮಹಾವೀರ ಸರ್ಕಲ್ ನಿಂದ ಹೊಸಹಳ್ಳಿ ಶಾಲೆವರೆಗೆ ಜನಸಾಮಾನ್ಯರು ಸಂಚರಿಸಲು ವಾಹನ ಸಂಚರಿಸಲು ಬೀದಿ ಹಣ್ಣು ತರಕಾರಿ ವ್ಯಾಪಾರಿಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿ ಇದರಿಂದ ಅಪಘಾತಗಳು ಮಾನಸಿಕ ಕಿರಿಕಿರಿ ಉಂಟಾಗುತ್ತಿತ್ತು ಇದನ್ನು ತೆರವುಗೊಳಿಸಬೇಕಾಗಿದೆ. ನಗರದಾದ್ಯಂತ ಹಲವಾರು ರಸ್ತೆಗಳಲ್ಲಿ ಚಿಕನ್ ಸೆಂಟರ್ ನಲ್ಲಿ ಕೋಳಿಗಳನ್ನು ಹೊರಗಿಟ್ಟು ಜನಸಾಮಾನ್ಯರು ಓಡಾಡುವ ಸಂದರ್ಭದಲ್ಲಿ ದುರ್ವಾಸನೆಯಿಂದ ಜನಸಾಮಾನ್ಯರಿಗೆ ಮಾನಸಿಕ ತೊಂದರೆ ಉಂಟಾಗುತ್ತಿದೆ ಬೀದಿ ವ್ಯಾಪಾರಿಗಳ ಕರ್ಕಶ ಮೈಕ್ ಶಬ್ದದಿಂದ ಜಲಸಾಮಾನ್ಯರು ಹಾಗೂ ಕಚೇರಿ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆ ಉಂಟಾಗುತ್ತಿದೆ, ಸಂಜೆಯ ಸರ್ಕಲ್ನಿಂದ ಕರ್ನಾಟಕ ಬಾರ್ ಆರ್.ಪಿ. ರಸ್ತೆ ಏಕಮುಖವಾಗಿದ್ದು ಇದರಿಂದ ಜನಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು ಇದರಿಂದ ಕಾವೇರಿ ನಗರ, ಹೌಸಿಂಗ್ ಬೋರ್ಡ್, ಗಾಂಧಿನಗರ ಈ ಭಾಗದಿಂದ ಬರುವ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ವಯೋವೃದ್ಧರು ಬಳಸಿ ಬರುವುದು ಉಂಟಾಗಿದ್ದು ಆರ್.ಪಿ. ರಸ್ತೆ ಏಕಮುಖ ಸಂಚಾರ ತರುವುಗೊಳಿಸಿದರೆ ಜನ ಸಾಮಾನ್ಯರಿಗೆ ಅನುಕೂಲ ಹೆಚ್ಚಾಗುತ್ತದೆ. ಮಂಡ್ಯ ನಗರದ ಎಸ್. ಪಿ. ಕಚೇರಿ ಮುಂಭಾಗ ಹಾಗೂ ಜಿಲ್ಲಾಧಿಕಾರಿಗಳ ವಾಸದ ಮನೆ ಮುಂಭಾಗ ಅವೈಜ್ಞಾನಿಕವಾಗಿ ರಸ್ತೆ ದಿಬ್ಬ ಅಳವಡಿಸಿದ್ದು ಇದನ್ನು ಕೂಡಲೇ ತಿರುವು ಕೊಡಿಸಿ ಜನಸಾಮಾನ್ಯರ ಆರೋಗ್ಯ ಉಳಿಸಬೇಕಾಗಿದೆ. ಮಂಡ್ಯ ನಗರದ ಕಾವೇರಿ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಜನರಲ್ಲಿ ಭಯದ ವಾತಾವರಣ ಉಂಟಾಗಿದೆ ತಕ್ಷಣ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ನಿಯಂತ್ರಿಸುವ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ. ಕುಡಿಯುವ ನೀರಿನ ಕಂದಾಯ ತಿಂಗಳಿಗೆ ೨೮೨ ರೂ ಇಂದ ೨೦೨ಕ್ಕೆ ಹಿಂದಿನ ಅಧಿಕಾರಿಗಳು ಕಡಿತಗೊಳಿಸಿದ್ದು ವಾಸ್ತವಂಶದ ಆಧಾರದ ಮೇಲೆ ಇನ್ನೂ ನೀರಿನ ತೆರಿಗೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಾವು ಕ್ರಮವಹಿಸಿ ಇನ್ನಿತರ ಹಲವಾರು ಸಮಸ್ಯೆಗಳಿಗೆ ತಾವು ಪೂರ್ವದಿಂದಲೂ ಸ್ಪಂದಿಸುತ್ತಿದ್ದು ಇನ್ನು ಮುಂದಿನ ದಿವಸಗಳಲ್ಲಿ ಎಲ್ಲರ ಮನಸ್ಸು ಸಂತೋಷವಾಗಿಸುವ ನಿಟ್ಟಿನಲ್ಲಿ ಮತದಾರರಿಗೆ ಮನಸ್ಸಿಗೆ ಸಂತೋಷವಾಗುವ ರೀತಿಯಲ್ಲಿ ಇನ್ನೂ ಹೆಚ್ಚು- ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ, ಸ್ವಚ್ಛತೆ, ಶಾಂತಿ ನೆಮ್ಮದಿ ವಾತಾವರಣದಲ್ಲಿ ಜನಸಾಮಾನ್ಯರು ವಾಸ ಮಾಡಲು ಸಾಧ್ಯವಾಗುತ್ತದೆ ಕೂಡಲೇ ಮಂಡ್ಯ ನಗರ ವ್ಯಾಪ್ತಿಯ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಒಂದು ಸಭೆ ಕರೆದು ಸಲಹೆ ಸಹಕಾರ ಇನ್ನು ಹೆಚ್ಚು ಹೆಚ್ಚುಪಡೆದುಕೊಳ್ಳುವಂತೆ ಮನವಿ ಮಾಡಿದರು.