ಕೆ. ಆರ್. ಪೇಟೆ :,ಕೃಷ್ಣರಾಜಪೇಟೆ ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಯುತ ಶಶಿಕುಮಾರ್ ಪಿ.ಎಲ್ ಅವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಅತಿಥಿ ಶಿಕ್ಷಕರ ಪರವಾಗಿ ಹತ್ತು ಹಲವು ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಾದ ಹೆಚ್,ಟಿ ಮಂಜುರವರಿಗೆ ಮನವಿ ಮಾಡಿದರು
ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಶಶಿಕುಮಾರ್ ಪಿ.ಎಲ್.ರವರು ಪ್ರಸ್ತುತ ಸಂದರ್ಭದಲ್ಲಿ ಅತಿಥಿ ಶಿಕ್ಷಕರು ಮುಖ್ಯವಾಗಿ ಎದುರಿಸುತ್ತಿರುವ ಉದ್ಯೋಗ ಭದ್ರತೆ,ಕನಿಷ್ಠ ವೇತನ,ಅನುಭವದ ಆಧಾರದ ಮೇಲೆ ಕೃಪಂಕ,ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಹೆಚ್ಚು ಅನುಭವ ಇರುವವರಿಗೆ ಮೊದಲ ಆದ್ಯತೆಯಂತಹ ಮುಖ್ಯ ವಿಚಾರಗಳನ್ನು ವಿವರಿಸಿ ಹಾಗೂ ಹೀಗೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ನೀಡಿ.ಪ್ರಸ್ತುತ ನಿಮ್ಮಈ ಘನ ಸರ್ಕಾರ ಈ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ತಮ್ಮ ತಮ್ಮ ಜೀವನವನ್ನು ನಿರ್ವಹಿಸುತ್ತಿರುವ ಎಷ್ಟೋ ಬಡಜೀವಗಳಿಗೆ ಆಧಾರ ಮಾಡಿಕೊಡಬೇಕೆಂದು ತಾಲೂಕಿನ ಅಧ್ಯಕ್ಷರಾದ ಶಶಿಕುಮಾರ್ ಪಿ.ಎಲ್.ರವರು ಕಳಕಳಿಯಾಗಿ ಕೇಳಿಕೊಂಡರು.ಈಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು,ಗೌರವ ಅಧ್ಯಕ್ಷರಾದ ಲೋಲಾಕ್ಷಿ ಜಗದೀಶ್,ಪ್ರಧಾನ ಕಾರ್ಯದರ್ಶಿಯಾದ ರಂಜಿನಿ,ಸಂಚಾಲಕರಾದ ಚಂದ್ರು ಹಾಗೂ ಸಂಘದ ಸದಸ್ಯರಾದ ಚಂದ್ರಮೋಹನ್ ಉಪಸ್ಥಿತರಿದ್ದರು.