Friday, April 11, 2025
Google search engine

Homeಬ್ರೇಕಿಂಗ್ ನ್ಯೂಸ್ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

ಮುಂಡರಗಿ: ಇತ್ತೀಚೆಗೆ ದೇಶಕ್ಕೆ ಸಮರ್ಪಿಸಲಾದ ನೂತನ ಸಂಸತ್‌ ಭವನದ ಒಳಾಂಗಣ ವಿನ್ಯಾಸದಲ್ಲಿ ನಗರದ ಯುವಕ ಅನಿಲ್‌ ಅಂದಪ್ಪ ಅಂಗಡಿ (ತಿಗರಿ) ಕೈಚಳಕವೂ ಇದೆ!

ಮುಂಬಯಿಯ ನಾರ್ಶಿ ಮತ್ತು ಅಸೋಸಿಯೇಟ್ಸ್‌ ಕಂಪೆನಿ ಸಂಸತ್‌ ಭವನದ ಒಳಾಂಗಣ ವಿನ್ಯಾಸ ರೂಪಿಸಿದ್ದು, ಅದರಲ್ಲಿ ಪ್ರಮುಖ ಪಾತ್ರ ವಹಿಸಿದ ನಗರದ ಅನಿಲ್‌ ಅಂಗಡಿ ಎನ್ನುವುದು ಸ್ಥಳೀಯರಿಗೆ ಹೆಮ್ಮೆಯ ಸಂಗತಿ.

ಅನಿಲ್‌ ಅವರು ಸಂಸತ್‌ನ ಒಳಾಂಗಣ ವಿನ್ಯಾಸ ಕಾರ್ಯ ನಿರ್ವಹಿಸಿರುವ ನಾರ್ಶಿ ಮತ್ತು ಅಸೋಸಿಯೇಟ್ಸ್‌ನಲ್ಲಿ ಪ್ಲ್ರಾನಿಂಗ್‌ ಪ್ರೊಜೆಕ್ಟ್ ಮ್ಯಾನೇಜರ್‌ ಹೆಡ್‌ ಆಗಿದ್ದಾರೆ.
ಮುಂಡರಗಿ ಪಟ್ಟಣದ ಪ್ರತಿಷ್ಠಿತ ಅಂಗಡಿ (ತಿಗರಿ) ಕುಟುಂಬದ ಗುಂಡಪ್ಪ ಅಂಗಡಿ ಅವರ ಮೊಮ್ಮಗನಾದ ಅನಿಲ್‌ ಅಂದಪ್ಪ ಅಂಗಡಿ ಅವರು ಜಗದ್ಗುರು ಅನ್ನದಾನೀಶ್ವರ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢಶಾಲಾ ಶಿಕ್ಷಣ ದಾವಣಗೆರೆ, ಗದುಗಿನ ಜೆ.ಟಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಡಿಪ್ಲೊಮಾ ಸಿವಿಲ್‌ ಎಂಜಿನಿಯರಿಂಗ್‌, ಬೆಂಗಳೂರಿನ ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ, ಪುಣೆಯ ನಿಕಾ¾ರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ಲ್ರಾನಿಂಗ್‌ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಎಂಬಿಎ ಮಾಡಿದ್ದಾರೆ.

ಪ್ಲ್ರಾನಿಂಗ್‌ ಮುಖ್ಯಸ್ಥ
ಟಾಟಾ ಪ್ರಾಜೆಕ್ಟ್‌ನಲ್ಲಿ ನಿರ್ಮಾಣವಾದ ನೂತನ ಸಂಸತ್‌ ಭವನದ ಒಳಾಂಗಣ ವಿನ್ಯಾಸದ ಜವಾಬ್ದಾರಿಯನ್ನು ನಿರ್ವಹಿಸಿರುವ ಮುಂಬಯಿಯ ನಾರ್ಶಿ ಮತ್ತು ಅಸೋಸಿಯೇಟ್ಸ್‌ ಅಡಿ ಅಸಿಸ್ಟೆಂಟ್‌ ಪ್ರಾಜೆಕ್ಟ್ ಮ್ಯಾನೇಜರ್‌ ಒಳಾಂಗಣ ಫಿಟ್‌ ಔಟ್‌ (ಎಚ್‌ಒ, ಮುಂಬಯಿ) ಮುಖ್ಯಸ್ಥರಾಗಿ ಅನಿಲ್‌ ಅಂಗಡಿ ಕಾರ್ಯನಿರ್ವಹಿಸಿದ್ದಾರೆ.

ನಾಗಪುರದ ಸಾಗವಾನಿ ಕಟ್ಟಿಗೆಯಲ್ಲಿ ಒಳಾಂಗಣ ವಿನ್ಯಾಸ ರೂಪಿಸಲಾಗಿದ್ದು, ನವಿಲುಗರಿಯ ವಿನ್ಯಾಸ ತುಂಬಾ ಚಾಲೆಂಜಿಂಗ್‌ ಆಗಿತ್ತು. ಈ ಕೆಲಸ ನವಿರಾದ ನೂತನ ಅನುಭವ ತಂದುಕೊಟ್ಟಿದೆ. ಐದು ವರ್ಷಗಳಲ್ಲಿ ಮಾಡಿಬೇಕಿದ್ದ ಕೆಲಸವನ್ನು ಕೇವಲ ಒಂದೂವರೆ ವರ್ಷದಲ್ಲಿ ಹಗಲು-ರಾತ್ರಿ ಎನ್ನದೇ ಪೂರ್ಣಗೊಳಿಸಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ದೇಶಕ್ಕಾಗಿ ಭಾವನಾತ್ಮಕವಾಗಿ ನಮ್ಮನ್ನು ಕೆಲಸದಲ್ಲಿ ತಲ್ಲೀನರಾಗುವಂತೆ ಮಾಡಿರುವುದೇ ಖುಷಿ ಪಡುವಂತಾಗಿದೆ

RELATED ARTICLES
- Advertisment -
Google search engine

Most Popular