ಮಂಡ್ಯ: ಅವಧಿ ಮೀರಿದರೂ ಕಬ್ಬು ಕಟಾವು ಮಾಡದೆ ಮೈ ಶುಗರ್ ಆಡಳಿತ ಮಂಡಳಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ರೈತರು ಆಪಾದನೆ ಮಾಡಿದ್ದಾರೆ.ಈ ವಿಚಾರವಾಗಿ ಮಂಡ್ಯ ತಾಲೂಕಿನ ಮಂಗಳ ಗ್ರಾಮಕ್ಕೆ ಮೈ ಶುಗರ್ ಅಧ್ಯಕ್ಷ ಸಿಡಿ ಗಂಗಾಧರ್ ರವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಕಟಾವಿಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಮೈ ಶುಗರ್ ಅಧ್ಯಕ್ಷ ಸಿಡಿ ಗಂಗಾಧರ್ ಮಾತನಾಡಿ, ನೊಂದ ರೈತರು ತಮ್ಮ ನೋವು, ಸಂಕಟವನ್ನು ಪ್ರದರ್ಶನ ಮಾಡಿದ್ದಾರೆ. ಜುಲೈ ನಲ್ಲಿ ಕಾರ್ಖಾನೆ ಪ್ರಾರಂಭಿಸಲು ಶುಗರ್ ಕಮಿಷನರ್ ಗೆ ಅಪೀಲ್ ಮಾಡಿದ್ವಿ. ಹಳೆ ಮೈಸೂರು ಭಾಗದಲ್ಲಿ ಆಗಸ್ಟ್ 1 ರಿಂದ ಪ್ರಾರಂಭಿಸಲು ಆದೇಶ ಮಾಡಿದ್ರು. ಆದರೆ ಒಂದು ತಿಂಗಳ ಕಬ್ಬು ಮಾತ್ರ ಸಕಾಲದಲ್ಲಿ ಕಟಾವು ಆಗಲಿಲ್ಲ ಇದರಿಂದಾಗಿ ರೈತರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ .ನಾಳೆಯೊಳಗೆ ಕಾರ್ಮಿಕರನ್ನು ಒದಗಿಸಿ ಕಬ್ಬು ಕಟಾವು ಮಾಡುವಂತೆ ತಿಳಿಸಿದ್ದೇವೆ ಎಂದು ಹೇಳಿದರು.
ಇದರಲ್ಲಿ ನಾವು ರಾಜಕೀಯ ಬೆರಿಸಲ್ಲ. ನೊಂದ ರೈತರು ಕಬ್ಬು ಕಟಾವಾಗದ ನೋವಿನಲ್ಲಿ ಮಾತನಾಡಿದ್ದಾರೆ ಅಷ್ಟೆ. ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಕಟಾವಿಗೂ ಸಂಬಂಧ ಇಲ್ಲ. ಕಬ್ಬು ಕಟಾವಿಗೆ ಅದು ಪೀಳ್ಮ್ಯಾನ್ ಜವಾಬ್ದಾರಿ ಇರುತ್ತಾರೆ. ಪಕ್ಷಪಾತ ಮಾಡದಾಗೆ ಸೂಚನೆ ಕೊಟ್ಟಿದ್ದೇನೆ. ನಾಳೆ 5 ಬ್ಯಾಚ್ ಕಬ್ಬು ಕಟಾವು ಕಾರ್ಮಿಕರ ಕೊಡ್ತಿದ್ದೇವೆ. ನನ್ನ ಧರ್ಮ ಪತ್ನಿ ನನ್ನ ಜೊತೆ ಬಂದಿದ್ದಾರೆ ಅಷ್ಟೆ ರೈತರಿಗೆ ಏನು ಅವಾಜ್ ಹಾಕಿಲ್ಲ
ರೈತರ ವಿರುದ್ದ ಮಾತನಾಡುವುದು ತಪ್ಪು ನಾನು ಕ್ಷಮೆಯಾಚನೆ ಮಾಡಿದ್ದೇನೆ ಎಂದು ಹೇಳಿದರು.
14 ತಿಂಗಳ ಕಬ್ಬು ಮಾತ್ರ ಬಾಕಿ ಇದೆ ಅಷ್ಟೆ. ಕಳೆದಬಾರಿ ಕಷ್ಟಪಟ್ಟು ಕಾರ್ಖಾನೆ ನಡೆಸಿದ್ದೇವೆ. ಈ ಬಾರಿ 50 ಲಕ್ಷ ಯೂನಿಟ್ ಉತ್ಪಾದನೆ ಮಾಡಿದ್ದೇವೆ. 61 ಟನ್ ಕಬ್ಬು ಅರೆಸಿದ್ದೇವೆ. ರೈತರಿಗೆ ತೊಂದರೆ ಆಗದ ರೀತಿ ಕ್ತಮ ವಹಿಸುತ್ತೇವೆಂದು ತಿಳಿಸಿದರು.