Friday, April 4, 2025
Google search engine

Homeರಾಜ್ಯಸಮರ್ಪಕವಾಗಿ ಪ್ಲಾಸ್ಟಿಕ್ ಮುಕ್ತ ಯೋಜನೆ ಅನುಷ್ಠಾನವಾಗುತ್ತಿಲ್ಲ

ಸಮರ್ಪಕವಾಗಿ ಪ್ಲಾಸ್ಟಿಕ್ ಮುಕ್ತ ಯೋಜನೆ ಅನುಷ್ಠಾನವಾಗುತ್ತಿಲ್ಲ


ಮೈಸೂರು: ದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಅವುಗಳ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ ಲೋಕನಾಥ ಬೇಸರ ವ್ಯಕ್ತಪಡಿಸಿದರು.
ಮಾನಸ ಗಂಗೋತ್ರಿಯ ಪರಿಸರ ಅಧಯನ ವಿಭಾಗದ ವತಿಯಿಂದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪರಿಸರ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿ ಎಂಬ ಪ್ರಸಕ್ತ ಸಾಲಿನ ಧ್ಯೇಯವಾಕ್ಯ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಜೂ.೫ರಂದು ಜಗತ್ತಿನಾದ್ಯಂತ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದಿನಾಚರಣೆ ಆಚರಿಸಲಾಗುತ್ತಿದೆಯಾದರೂ ಅಂದು ತೆಗೆದುಕೊಳ್ಳುವ ನಿರ್ಣಯಗಳನ್ನು ಸಮರ್ಪಕವಾಗಿ ಜಾರಿಗೊಳಿಸದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಜೀವಗೋಳಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಇಂದಿಗೂ ಸಾಧವಾಗಿಲ್ಲ. ಇದರಿಂದ ಪ್ರತಿವರ್ಷ ಪರಿಸರ ವಿರೋಧಿ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಲೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಯ ಬಗ್ಗೆ ಇತರರಿಗೆ ಹೇಳುವ ಮೊದಲು ಆ ನಿಟ್ಟಿನಲ್ಲಿ ನಾವು ನಡೆದುಕೊಳ್ಳುತ್ತಿದ್ದೇವೆಯೇ ಎಂದು ಒಮ್ಮೆ ಯೋಚಿಸಬೇಕಿದೆ. ನಮ್ಮ ಅವಶ್ಯಕತೆಗೂ ಮಿಗಿಲಾಗಿ ಪ್ಲಾಸ್ಟಿಕ್ ಬಳಕೆ, ವಾಹನಗಳ ಖರೀದಿ ಹೀಗೆ ಮಾಲಿನ್ಯಕಾರಕ ವಸ್ತುಗಳ ಬಳಕೆ ಪ್ರತಿನಿತ್ಯ ಹೆಚ್ಚಳವಾಗುತ್ತಿದ್ದು, ಸಾಧವಾದಷ್ಟು ಕಡಿವಾಣ ಹಾಕುವಂತೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯಗಳಂತಹ ಅರಿವು ಮೂಡಿಸುವ ಆವರಣದಲ್ಲೇ ಒಂದು ಸುತ್ತು ಹಾಕಿದರೆ ಸಾಕು ಪರಿಸರ ದಿನದಂದೆ ಸಾಕಷ್ಟು ಪ್ಲಾಸ್ಟಿಕ್ ಸಿಗುತ್ತದೆ. ಹುಟ್ಟು ಹಬ್ಬದ ಹೆಸರಿನಲ್ಲಿ ವಿದ್ಯಾರ್ಥಿಗಳು ಬಳಸುವ ಪರಿಸರ ವಿರೋಧಿ ವಸ್ತುಗಳು ಸಾಕಷ್ಟಿವೆ. ಆಚರಣೆ ಮಾಡುವುದು ಸರಿಯಲ್ಲ ಎಂದು ಯಾರೂ ಹೇಳುವುದಿಲ್ಲ. ನಮ್ಮ ಸಂತೋಷದ ಜತೆಗೆ ನಮಗಿರುವ ಜವಾಬ್ದಾರಿಗಳನ್ನೂ ಮರೆಯಬಾರದು. ಕ್ಯಾಂಪಸನ್ನು ಸುಂದರವಾಗಿ ಇಡುವ ನಿಟ್ಟಿನಲ್ಲಿ ನೌಕರರು ಸಾಕಷ್ಟು ಶ್ರಮ ಹಾಕುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ತಂತ್ರಜ್ಞಾನದಲ್ಲಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ನಮ್ಮೆಲ್ಲರ ಬದುಕಿಗೆ ಅಗತ್ಯವಾಗಿರುವ ಪರಿಸರವನ್ನ ಸಂರಕ್ಷಿಕೊಳ್ಳುವಲ್ಲಿ ನಾವು ಹಿಂದೆ ಉಳಿಯುತ್ತಿದ್ದೇವೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಇರಬೇಕು. ಸಾಲುಮರದ ತಿಮ್ಮಕ್ಕನಂತಹ ಹಿರಿಯರು ನಮಗೆ ಆದರ್ಶವಾಗಬೇಕು.ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಽಕಾರಿ ಡಾ. ಕೆ.ಎನ್.ಬಸವರಾಜು ಸಮಾರಂಭ ಉದ್ಘಾಟಿಸಿದರು. ಕುಲಸಚಿವೆ ವಿ.ಆರ್ ಶೈಲಜಾ, ವಿಭಾಗದ ಮುಖ್ಯಸ್ಥ ಡಾ.ಜಿ.ವಿ ವೆಂಕಟರಮಣ, ಡಾ.ಟಿ.ರಾಜೇಶ್ ಕುಮಾರ್, ಡಾ.ಕೆ ಬಸವರಾಜು, ಡಾ.ಎಸ್.ಶ್ರೀಕಂಠಸ್ವಾಮಿ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular