ಕೆ.ಆರ್ಪ.ಪೇಟೆ: ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಭೈರವೈಖ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರಸನ್ನರವರು
ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ತರ ಸ್ಥಾನವಿದೆ.ಬ್ರಹ್ಮ ವಿಷ್ಣು ಮಹೇಶ್ವರರಿಗೆ ಸರಿ ಸಮಾನವಾಗಿ ಗುರುವಿನ ಸ್ಥಾನವನ್ನು ನಿಗಧಿಪಡಿಸಿದ್ದು ಗುರುವನ್ನು ಸಾಕ್ಷಾತ್ ಪರಬ್ರಹ್ಮನೆಂದೇ ಬಣ್ಣಿಸಲಾಗಿದೆ ವರ್ಣಮಾತ್ರಂ ಕಲಿದಾತನೇ ಗುರು ಎಂದು ಹೇಳಲಾದರೂ ಕೇವಲ ಕಲಿಸಿದವರು ಮಾತ್ರ ಗುರುವಲ್ಲ ಬದುಕಿನ ದಾರಿ ತೋರುವ ಮಾರ್ಗದರ್ಶಕರೂ ಗುರುಗಳೇ ಗುರು ಕೇವಲ ಮಾರ್ಗದರ್ಶಕ ಮಾತ್ರನಲ್ಲ ಮುಕ್ತಿದಾಯಕನೂ ಹೌದು.ಆದ್ದರಿಂದಲೇ ನಮ್ಮ ಹಿರಿಯರು ಗುರುವಿನ ಗುಲಾಮನಾಗುವತನಕ ದೊರಕದಯ್ಯ ಮುಕುತಿ ಎಂದಿದ್ದಾರೆಂದು ಬದಲಾದ ಬದುಕಿನ ಪರಿಸರದಲ್ಲಿ ಗುರು-ಶಿಷ್ಯರ ಸಂಬಂಧಗಳು ಸಡಿಲಗೊಳುತ್ತಿವೆ.
ಕಲಿಯುವ ಮತ್ತು ಕಲಿಸುವ ಸಂಬಂಧಗಳು ವ್ಯಾವಹಾರಿಕವಾಗುತ್ತಿದ್ದು ಚೈತನ್ಯಮಯವಾಗಿದ್ದ ಗುರು-ಶಿಷ್ಯರ ಪರಂಪರೆಯ ಬೇರುಗಳು
ಸಡಿಲಗೊಂಡಿವೆ ಸಡಿಲಗೊಂಡಿರುವ ಗುರು-ಶಿಷ್ಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು ಶಿಕ್ಷಣ,ಆರೋಗ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಯಾಗಿ ಭೈರವೈಖ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಕೊಡುಗೆಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರಸಾದೇಗೌಡ,ರಾಮಚಂದ್ರ,ಸುನೀಲ್ ಕುಮಾರ್,ಮುಖ್ಯ ಶಿಕ್ಷಕರಾದ ಶ್ರೀಮತಿವಿಜಯ,ದ್ರಾಕ್ಷಿಯಿಣಿ,ಅರ್ಪಿತಾ,ಮಾಧ್ಯಮ ಸ್ಟುಡಿಯೋ ಕಛೇರಿಯ ಜಿ.ಪಿ.ರಾಜು,ಲೋಕೇಶ್.ವಿ ಶ್ಯಾರಹಳ್ಳಿ ಎಸ್,ಗೋವಿಂದರಾಜು, ಹೊಸಹೊಳಲು ಹೆಚ್,ಜಿ ಶ್ರೀನಿವಾಸ್,ಎನ್,ಕೆ ಸಾಯಿಕುಮಾರ್ ಸೇರಿದಂತೆ ಶಾಲೆಯ ಉಪನ್ಯಾಸಕರು,ಶಿಕ್ಷಣ ವರ್ಗದವರು ಉಪಸ್ಥಿತರಿದ್ದರು,