Saturday, April 12, 2025
Google search engine

Homeಸ್ಥಳೀಯಸರ್ಕಾರ ನೀಡುತ್ತಿರುವ ಗ್ಯಾರಂಟಿಗಳನ್ನು ಸದುಪಯೋಗಪಡಿಸಿಕೊಳ್ಳಿ: ಶಾಸಕ ಡಿ.ರವಿಶಂಕರ್

ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳನ್ನು ಸದುಪಯೋಗಪಡಿಸಿಕೊಳ್ಳಿ: ಶಾಸಕ ಡಿ.ರವಿಶಂಕರ್


ಕೆ.ಆರ್.ನಗರ: ರಾಜ್ಯದ ಕಾಂಗ್ರೇಸ್ ನೇತೃತ್ವದ ಸರಕಾರ ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಯೋಜನೆಗಳ ಜಾರಿ ಮಾಡುವ ಮೂಲಕ ನೀಡಿದ ಮಾತಿನಂತೆ ನಡೆದುಕೊಂಡಿದ್ದು ಇಂದು ಜಾರಿ ಮಾಡಲಾಗಿರುವ ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಸ್‌ನಿಲ್ದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಚಾಲನೆ ನೀಡುವ ಮೂಲಕ ಶಕ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಶಕ್ತಿ ಯೋಜನೆ ಇಂದು ಜಾರಿಗೊಳಿಸಲಾಗಿದ್ದು ಇನ್ನುಳಿದ ೪ ಯೋಜನೆಗಳನ್ನು ಸಹ ರಾಜ್ಯ ಸರಕಾರ ಜಾರಿ ಮಾಡುವ ಮೂಲಕ ಜನತೆಗೆ ನೀಡಿದ ಮಾತನ್ನು ಉಳಿಸಿಕೊಂಡು ರಾಜ್ಯದ ಜನತೆಯ ಪರ ಕೆಲಸ ಮಾಡಲಿದೆ ಎಂದರು.
ರಾಜ್ಯ ಸಾರಿಗೆ ಸಂಸ್ಥೆಯ ಎಸಿ ಕೋಚ್, ಸ್ಲೀಪರ್‌ಕೋಚ್, ರಾಜಹಂಸ ಹೊರತುಪಡಿಸಿ ಇನ್ನುಳಿದ ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದ್ದು ಎಲ್ಲರೂ ಮುಂದಿನ ಮೂರು ತಿಂಗಳಲ್ಲಿ ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳುವಂತೆ ಅಲ್ಲಿಯ ತನಕ ನಿಗದಿಪಡಿಸಿರುವ ದಾಖಲೆ ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ ಎಂದರು.
ಸಾರಿಗೆ ಘಟಕ ವ್ಯವಸ್ಥಾಪಕ ಮಹೇಶ್ ಮಾತನಾಡಿ ಸಂಸ್ಥೆಯಲ್ಲಿನ ಸೇವೆಯ ಬಗ್ಗೆ ಮಾಹಿತಿ ನೀಡಿದರು. ತಹಸೀಲ್ದಾರ್ ಸಂತೋಷ್‌ಕುಮಾರ್, ಸಾಲಿಗ್ರಾಮ ತಹಸೀಲ್ದಾರ್ ತಿಮ್ಮಪ್ಪ, ತಾ.ಪಂ.ಇಒ ಹೆಚ್.ಕೆ.ಸತೀಶ್, ಸಂಚಾರ ನಿಯಂತ್ರಾಣಧಿಕಾರಿ ಕಾಳಮ್ಮನಕೊಪ್ಪಲು ಸುರೇಶ್, ಪುರಸಭಾ ಸದಸ್ಯ ಪ್ರಕಾಶ್, ಗಂಧನಹಳ್ಳಿ ಡೈರಿ ಅಧ್ಯಕ್ಷ ಗಾಂಧಿ ಶಿವಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯ್ಯದ್ ಜಾಬೀರ್, ಕುರುಬರ ಸಂಘದ ಅಧ್ಯಕ್ಷ ಚೀರ್‍ನಹಳ್ಳಿ ಶಿವಣ್ಣ, ಚೌಕಹಳ್ಳಿ ರಾಘವೇಂದ್ರ ಗುಡ್ಡಪ್ಪ, ಗಂಧನಹಳ್ಳಿ ಹೇಮಂತ್, ಪ್ರಸನ್ನಕುಮಾರ್, ಹರದನಹಳ್ಳಿ ಮಂಜಪ್ಪ, ಕೆಸ್ತೂರುಗೇಟ್ ಮಹದೇವ್, ಶಾಂತಿ ರಾಜಯ್ಯ, ಲತಾ, ರಾಣಿ, ರಾಜಯ್ಯ, ಪೋಟೋ ಮಹದೇವ್, ಗೀತಾಮಹೇಶ್, ಮಿರ್ಲೆ ನಂದೀಶ್ ಮತ್ತಿತರ ಮುಖಂಡರು ಸಾರಿಗೆ ಸಂಸ್ಥೆ ಸಿಬ್ಬಂದಿ ವರ್ಗದವರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ನಂತರ ಒಂದಷ್ಟು ದೂರ ಬಸ್‌ನಲ್ಲಿ ಮಹಿಳೆಯರೊಡಗೂಡಿ ಪ್ರಯಾಣಿಸಿದ ಶಾಸಕರು ಮಹಿಳೆಯರಿಗೆ ಟಿಕೆಟ್ ವಿತರಿಸಿ, ಸಿಹಿ ಹಂಚಿ ಪ್ರಯಾಣಕ್ಕೆ ಶುಭಕೋರಿದರು.

RELATED ARTICLES
- Advertisment -
Google search engine

Most Popular