Friday, April 18, 2025
Google search engine

Homeಸ್ಥಳೀಯಸಿಂದುಘಟ್ಟ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಶಾ ಸೋಮಶೇಖರ್ ಆಯ್ಕೆ

ಸಿಂದುಘಟ್ಟ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಶಾ ಸೋಮಶೇಖರ್ ಆಯ್ಕೆ

ಕೆ ಆರ್ ಪೇಟೆ: ಕೆಆರ್ ಪೇಟೆ ತಾಲ್ಲೋಕಿನ ಶೀಳನೆರೆ ಹೋಬಳಿಯ ಸಿಂದುಘಟ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿಶ್ರೀಮತಿ ಆಶಾಸೋಮಶೇಖರ್ ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ಹಿಂದಿನ ಅಧ್ಯಕ್ಷರಾಗಿದ್ದ ನವೀನ ಎಎನ್,ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆಶಾಸೋಮಶೇಖರ್ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದಿದ್ದರಿಂದ ಇಂದು ನಿಗದಿಯಾಗಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ಆಶಾ ಸೋಮಶೇಖರ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ ನಂತರ ಮಾತನಾಡಿದ ನೂತನ ಅಧ್ಯಕ್ಷೆ ಸಿ,ಕೆ ಆಶಾಸೋಮಶೇಖರ್ ನನಗೆ ಅಧ್ಯಕ್ಷರಾಗಲೂ ಸಹಕರಿಸಿರುವ ನನ್ನ ಸಹೋದ್ಯೋಗಿ ಸದಸ್ಯರುಗಳು ಮತ್ತು ಶಾಸಕರಾದ ಹೆಚ್,ಟಿ ಮಂಜು,ತಾಲ್ಲೋಕು ಘಟಕದ ಅಧ್ಯಕ್ಷರಾದ ಜಾನಕೀರಾಮ್,ಹೆಚ್,ಟಿ ಲೋಕೇಶ್ ರವರಿಗೂ ಧನ್ಯವಾದಗಳನ್ನು ಅರ್ಪಿಸಿದರು ನಂತರ ಮಾತಾನಾಡಿ ನನಗೆಸಿಕ್ಕಿರುವ ಕಡಿಮೆ ಸಮಯದ ಅವಧಿಯಲ್ಲಿ ಸಾರ್ವಜನಿಕರಿಗೆ ಸರ್ಕಾರದಿಂದ ಸಿಗಬಹುದಾದ.ನರೇಗಾ,ಆಶ್ರಯಯೋಜನೆ ಮನೆ, ಕುಡಿಯುವ ನೀರು ಸೇರಿದಂತೆಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು ಸಂದರ್ಭದಲ್ಲಿ ಚುನಾವಣಾಧಿಕಾರಿ ಸತೀಶ್ ಬಾಬು,ಪಿಡಿಓ ಕೆ ಯಶಸ್ವಿನಿ ಗ್ರಾಪಂ ಮಾಜಿ ಅಧ್ಯಕ್ಷ ನವೀನ್,ಸದಸ್ಯರಾದ ಕ್ಯಾತನಹಳ್ಳಿ ಸೋಮಶೇಖರ್ ಲಾವಣ್ಯ ಕುಮಾರ್,ರೂಪ ಮಹದೇವ್,ಸುಮ ಚಲುವರಾಜ್,ರಾಜೇಶ್ವರಿ ನರಸಿಂಹ,ನಂಜಪ್ಪ ಇರ್ಪಾನ್ ,ಸೋಮಶೇಖರ್ ರಾಜೇಗೌಡ,ಮಂಜೇಗೌಡ, ಉಯ್ಗೋನಹಳ್ಳಿ ಕಿಟ್ಟಿ ,ಸಿಂದಘಟ್ಟಸುರೇಶ್ ಗಣೇಶ್ ಹಿರಿಕಳಲೆ ಪ್ರಭಾಕರ್ ಮೈಲನಹಳ್ಳಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular