ಮಡಿಕೇರಿ: ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿದ್ದ ಸೆಲ್ಫಿ ಕಂಟೆಸ್ಟ್’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮೇ ೧೦ ರಂದು ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಂದು ಮತದಾನ ಮಾಡಿದ ಬಳಿಕ ಮತದಾನ ಕೇಂದ್ರದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಕಳುಹಿಸುವಂತೆ ತಿಳಿಸಲಾಗಿತ್ತು.
ಈ ನಿಟ್ಟಿನಲ್ಲಿ ಸ್ಪರ್ಧೆಯ ನಿಯಮಾನುಸಾರ ಸೆಲ್ಫಿ ಕಳುಹಿಸಿ ವಿಜೇತರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿಜೇತರಿಗೆ ಜಿ.ಪಂ.ಸಿಇಒ ಡಾ. ಎಸ್.ಆಕಾಶ್ ಅವರು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಪ್ರಥಮ ಬಹುಮಾನವನ್ನು ಕಾರ್ಯಪ್ಪ, ದ್ವಿತೀಯ ಬಹುಮಾನವನ್ನು ಬಾನಂಡ ಆಶಾ ಸೂದನ್, ತೃತೀಯ ಬಹುಮಾನವನ್ನು ಗಿರಿಕುಮಾರ್ ಪಡೆದುಕೊಂಡರು.ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಯೋಜನಾಧಿಕಾರಿ ರಾಜ್‌ಗೋಪಾಲ್, ತಾ.ಪಂ.ಇಒ ಅಪ್ಪಣ್ಣ ಇತರರು ಇದ್ದರು.