ಬೇಕಾಗುವ ಪದಾರ್ಥಗಳು…
- ಸ್ವೀಟ್ ಕಾರ್ನ್- 1 ಬಟ್ಟಲು (ಬೇಯಿಸಿ ತರಿ ತರಿಯಾಗಿ ರುಬ್ಬಿದ್ದು)
- ಈರುಳ್ಳಿ- 1 (ಸಣ್ಣಗೆ ಹೆಚ್ಚಿಕೊಂಡಿದ್ದು)
- ಕಡಲೆಹಿಟ್ಟು- ಅರ್ಧ ಬಟ್ಟಲು
- ಹಸಿಮೆಣಸಿನ ಕಾಯಿ- 2-3 (ಸಣ್ಣಗೆ ಹೆಚ್ಚಿಕೊಂಡಿದ್ದು)
- ಅಕ್ಕಿ ಹಿಟ್ಟು-1 ಚಮಚ
- ಅರಿಶಿನ – ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಚಾಟ್ ಮಸಾಲ- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿಕೊಂಡಿದ್ದು)
- ಕರಿಬೇವು- ಸ್ವಲ್ಪ (ಸಣ್ಣಗೆ ಹೆಚ್ಚಿಕೊಂಡಿದ್ದು)
- ಜೀರಿಗೆ ಪುಡಿ- ಸ್ವಲ್ಪ
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಒಂದು ಬೌಲ್ ಗೆ ತರಿ ತರಿಯಾಗಿ ರುಬ್ಬಿದ ಕಾರ್ನ್ ಹಾಕಿ ನಂತರ ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಕೊತ್ತಂಬರಿ ಸೊಪ್ಪು,ಅರಿಶಿನ, ಚಾಟ್ ಮಸಾಲ, ಜೀರಿಗೆಪುಡಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಸ್ವಲ್ಪ ಸ್ವಲ್ಪ ಹಿಟ್ಟು ಕೈಯಲ್ಲಿ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರಗೆ ಕರಿಯಿರಿ. ಇದೀಗ ರುಚಿಕರವಾದ ಸ್ವೀಟ್ ಕಾರ್ನ್ ಪಕೋಡಾ ಸವಿಯಲು ಸಿದ್ಧ.