Saturday, April 19, 2025
Google search engine

Homeರಾಜ್ಯಹಲ್ಲೆಗೊಳಗಾದ ಯುವಕನ ಆರೋಗ್ಯ ವಿಚಾರಣೆ

ಹಲ್ಲೆಗೊಳಗಾದ ಯುವಕನ ಆರೋಗ್ಯ ವಿಚಾರಣೆ


ಮೈಸೂರು: ಹುಟ್ಟುಹಬ್ಬ ಸಂಭಮಾಚರಣೆಯಲ್ಲಿ ಯುವಕರ ಗುಂಪು ಭಾರತ್ ಮಾತಾ ಕೀ ಜೈ ಎಂದಿದ್ದಕ್ಕೆ ಅನ್ಯ ಕೋಮಿನ ಯುವಕರು ಚಾಕು ಇರಿದಿರುವ ಘಟನೆ ನಡೆದಿದೆ. ಕಾಂಗ್ರೆಸ್ ಜಯಭೇರಿ ಬಾರಿಸಿದೆ ಎಂಬ ಹುಮ್ಮಸ್ಸಿನಲ್ಲಿ ಕೆಲವರು ಇzರೆ. ಇಂತಹ ಘಟನೆಗಳು ಮರುಕಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ ಹೇಳಿದರು.
ಕೆಲ ದಿನಗಳ ಹಿಂದೆ ನಂಜನಗೂಡಿನಲ್ಲಿ ಹುಟ್ಟುಹಬ್ಬ ಆಚರಣೆ ವೇಳೆ ಗಲಾಟೆ ವಿಚಾರದಲ್ಲಿ ಅನ್ಯ ಕೋಮಿನ ಯುವಕರಿಂದ ಡ್ರ್ಯಾಗರ್ ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಯುವಕನ ಭೆಟಿ ಮಾಡಲು ಬಿಜೆಪಿ ನಿಯೋಗದೊಂದಿಗೆ ಆಗಮಿಸಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನಲ್ಲಿ ಯುವಕರ ಗುಂಪು ಹುಟ್ಟುಹಬ್ಬ ಆಚರಣೆ ಮಾಡುವ ಸಂದಭ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರೆಂದು ಮಾರಾಕಾಸ್ತ್ರದಿಂದ ಹ ಮಾಡಿರುವುದು ಖಂಡನೀಯ. ಈ ಘಟನೆ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಇಲ್ಲಿಗೆ ಬಂದಿzನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆ ನಡೆಯುತ್ತಿದೆ. ಮುಂದೆ ಇಂತಹ ಘಟಕಗಳು ನಡೆಯಬಾರದು. ಅಮಾಯಕ ಹುಡುಗನ ಮೇಲೆ ಮಾರಕ ಅಸ್ತ್ರಗಳನ್ನು ಉಪಯೋಗಿಸಿರುವುದು ಸರಿಯಲ್ಲ. ತಪ್ಪತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ನಿಯೋಗದ ಉzಶ ಗಾಯಾಳುವಿನ ಬೆಂಬಲಕ್ಕೆ ನಿಲ್ಲುವುದರ ಜತೆಗೆ, ಚುನಾವಣೆಯಲ್ಲಿ ಸೋತ ನಂತರ ನಮ್ಮ ಕಾರ್ಯಕರ್ತರು ಎದೆ ಗುಂದಬಾರದು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವುದಾಗಿದೆ. ಈ ವರದಿಯನ್ನು ವರಿಷ್ಠರಿಗೆ ನೀಡುತ್ತೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ಕಾಂಗ್ರೆಸ್ ಗೆದ್ದಿರುವ ಹುಮ್ಮಸ್ಸಿನಲ್ಲಿ ಕೆಲವರಿದ್ದಾರೆ. ಈ ಹುಮ್ಮಸ್ಸೆ ಘಟನೆಗೆ ಕಾರಣವಾಗಿದೆ. ಯುವಕನ ಆರೋಗ್ಯ ಸ್ಥಿರವಾಗಿದೆ. ನಂಜನಗೂಡಿನ ನಿಂಗಣ್ಣ ಸರ್ಕಲ್‌ನಲ್ಲಿ ಎ ರೀತಿ ಆಚರಣೆಗಳು ನಡೆಯುತ್ತೆ. ಇಂತಹ ಘಟನೆಗಳು ಮರುಕಳಿಸಬಾರದು. ಯಾವುದೇ ವರ್ಗವನ್ನು ಭಯಪಡಿಸುವ ಕೆಲಸ ಆಗಬಾರದು ಎಂದರು.
ನಿಂಗಣ್ಣ ವೃತ್ತ ಸೂಕ್ಷ್ಮ ಪ್ರದೇಶವಾಗಿದ್ದು, ಕಳೆದ ೫ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದೆವು. ನಿತ್ಯ ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಿ, ಕಟ್ಟೆಚ್ಚರ ವಹಿಸಲಾಗಿತ್ತು. ಆದರೆ, ಚುನಾವಣೆ ಬಳಿಕ ಈ ವ್ಯವಸ್ಥೆ ಇಲ್ಲವಾಗಿದೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎರಡು ಕೋಮಿನ ಮುಖಂಡರೊಂದಿಗೆ ಶಾಂತಿ ಸಭೆ ನಡೆಸುತ್ತಿzರೆ ಎಂದರು.
ನಗರದ ಕೆ.ಆರ್.ಆಸ್ಪತ್ರೆಯ ಕಲ್ ಬಿಲ್ಡಿಂಗ್ ವಿಭಾಗದಲ್ಲಿ ಹಗೊಳಗಾದ ಯುವಕ ಪ್ರಸಾದ್ ಚಿಕಿತ್ಸೆ ಪಡೆಯುತ್ತಿದ್ದು, ಬಿಜೆಪಿ ನಿಯೋಗ ಮಂಗಳವಾರ ಸಂಜೆ ಭೆಟಿ ನೀಡಿ ಆರೋಗ್ಯ ವಿಚಾರಿಸಿದ್ದಲ್ಲದೇ ಘಟನೆ ಸಂಬಂಧ ಮಾಹಿತಿ ಕಲೆಯಾಕಿತು. ಬಳಿಕ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘಟನೆ ಕುರಿತು ನಿಯೋಗಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಚಿವರಾದ ಎನ್.ಮಹೇಶ್, ನಾರಾಯಣ ಗೌಡ ಇದ್ದರು.

RELATED ARTICLES
- Advertisment -
Google search engine

Most Popular