Friday, April 11, 2025
Google search engine

Homeರಾಜ್ಯ ಹಳ್ಳಿಗಳು ಅಭಿವೃದ್ದಿ ಕಂಡಾಗ ದೇಶ ತಾನಾಗಿಯೇ ಪ್ರಗತಿ ಕಾಣಲಿದೆ: ಶಾಸಕ ಡಿ.ರವಿಶಂಕರ್

 ಹಳ್ಳಿಗಳು ಅಭಿವೃದ್ದಿ ಕಂಡಾಗ ದೇಶ ತಾನಾಗಿಯೇ ಪ್ರಗತಿ ಕಾಣಲಿದೆ: ಶಾಸಕ ಡಿ.ರವಿಶಂಕರ್

 

ಕೆ.ಆರ್.ನಗರ: ದೇಶದ ಅಭಿವೃದ್ದಿಯಲ್ಲಿ ಗ್ರಾಮ ಪಂಚಾಯ್ತಿ ಕಾರ್ಯ ಬಹಳ ಪ್ರಮುಖವಾದದು ಇದನ್ನು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು  ಕಾರ್ಯದರ್ಶಿಗಳು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ತಾಲೂಕು ಪಂಚಾಯಿತಿ ಸಬಾಂಗಣದಲ್ಲಿ ನಡೆದ ಅಭಿವೃದ್ದಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಬೇಕಾಗುವ ಕೆಲಸಗಳನ್ನು ತಾವುಗಳು ವೇಗವಾಗಿ ಮಾಡಬೇಕು, ಹಳ್ಳಿಗಳು ಅಭಿವೃದ್ದಿ ಕಂಡಾಗ ದೇಶ ತಾನಾಗಿಯೇ ಪ್ರಗತಿ ಕಾಣಲಿದೆ ಎಂದರು.

ನರೇಗಾದಲ್ಲಿ ಸಾಕಷ್ಟು ಅನುದಾನವಿದ್ದು ಕೆರೆ, ಕಟ್ಟೆಗಳನ್ನು ಅಭಿವೃದ್ದಿ ಪಡಿಸುವುದರ ಜತೆಗೆ ಅಲ್ಲಲ್ಲಿ ಚೆಕ್ ಡ್ಯಾಮ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚಿಸಿದ ಶಾಸಕರು ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿಸಬೇಕು ಎಂದು ತಿಳಿಸಿದರಲ್ಲದೆ ಕೆರೆ ಕಟ್ಟೆಗಳ ಏರಿಯ ಮೇಲೆ ಗಿಡ ಮರಗಳನ್ನು ಬೆಳೆಸಿ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಅಭಿವೃದ್ದಿ ಪಡಿಸಬೇಕು ಎಂದು  ಸಲಹೆ ನೀಡಿದರು.

ಚರಂಡಿ ಮತ್ತು ಸಿಸಿ ರಸ್ತೆಗಳನ್ನು ಮಾಡುವ ಸಂದರ್ಭದಲ್ಲಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಒತ್ತುವರಿ ತೆರವು ಮಾಡಿ ಉತ್ತಮವಾದ ರಸ್ತೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನಿರ್ವಹಣೆ ಮಾಡುವುದಲ್ಲದೆ ವಾಟರ್ ಮ್ಯಾನ್‌ಗಳು ವಾಲ್ ಮತ್ತು ಟ್ಯಾಂಕ್‌ಗಳನ್ನು ಶುಚಿಯಾಗಿಡುವಂತೆ ತಾಕೀತು ಮಾಡಿದರು.

ಪ್ರತಿ ಗ್ರಾಮದಲ್ಲೂ ಉತ್ತಮವಾದ ಸ್ಮಶಾನ ಇರಬೇಕು ಇದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಹಕಾರವನ್ನು ತಾಲೂಕು ಆಡಳಿತ ವತಿಯಿಂದ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದ ಅವರು ಒತ್ತುವರಿ ಇಲ್ಲದೆ ತೆರವು ಕಾಂಪೌಂಡ್ ಅಥವಾ ತಂತಿ ಬೇಲಿ ನಿರ್ಮಾಣ ಮಾಡುವುದರ ಜತೆಗೆ ಕುಡಿಯುವ ನೀರು ಸೇರಿದಂತೆ ಇತರ ಮೂಲಸೌಕರ್ಯಗಳನ್ನು ನರೇಗಾದಲ್ಲಿ ಮಾಡಿಸಬೇಕು ಎಂದು ಆದೇಶಿಸಿದರು.

ಚುನಾವಣೆಗೂ ಮುನ್ನಾ ೧೬೨೦ ಆಶ್ರಯ ಮನೆಗಳು ಮಂಜೂರಾಗಿದ್ದು ಈಗಾಗಲೇ ಫಲಾನುಭವಿಗಳನ್ನು ಕೆಲವು ಪಂಚಾಯಿತಿಯವರು ಆಯ್ಕೆ ಮಾಡಿದ್ದಾರೆ ಅವುಗಳನ್ನು ರದ್ದು ಪಡಿಸಿ ಹೊಸದಾಗಿ ಗ್ರಾಮ ಸಭೆ ನಡೆಸಿ ಮನೆ ನಿರ್ಮಾಣಕ್ಕೆ ಬೇಕಾಗಿರುವ ಎಲ್ಲಾ ದಾಖಲಾತಿಗಳನ್ನು ಹೊಂದಿರುವ ಮತ್ತು ಅರ್ಹರನ್ನು ಆಯ್ಕೆ ಮಾಡಿ ಈ ತಿಂಗಳ ೨೨ರ ಒಳಗೆ ಪಟ್ಟಿ ಸಲ್ಲಿಸುವಂತೆ ಸೂಚಿಸಿದಲ್ಲದೆ ಸಾಲಿಗ್ರಾಮ ತಾಲೂಕಿನಲ್ಲಿ ಫಲಾನುಭವಿಗಳ ದಾಖಲಾತಿ ಪಡೆಯಲು ತಾಂತ್ರಿಕ ತೊಂದರೆ ಇರುವುದರಿಂದ ವಸತಿ ಸಚಿವರಿಗೆ ಪತ್ರ ಬರೆದು ಇನ್ನಷ್ಟು ದಿನಗಳ ಕಾಲಾವಕಾಶ ಕೊಡಿಸುವುದಾಗಿ ತಿಳಿಸಿದರು.

೩೪ ಪಂಚಾಯಿತಿಗಳಲ್ಲೂ ಆಶ್ರಯ ನಿವೇಶನಗಳಿಗೆ ಬೇಡಿಕೆ ಇದ್ದು ಸರ್ಕಾರಿ ಭೂಮಿ ಇರುವುದನ್ನು ಗುರುತಿಸಿ ಬಡವರಿಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದಲ್ಲದೆ ಸಾಲ ಸೌಲಭ್ಯ ಪಡೆಯಲು ಮನೆಗಳಿಗೆ ೧೧ಬಿ ಸೇರಿದಂತೆ ಇತರ ದಾಖಲಾತಿಗಳು ಅವಶ್ಯಕತೆ ಇರುವುದರಿಂದ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಆಶ್ರಯ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಹಕ್ಕು ಪತ್ರಗಳನ್ನು ವಿತರಿಸಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಧಿಕಾರಿಗಳು ಮತ್ತು ಕಾರ್ಯದರ್ಶಿ ಸಂಘದ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನ : ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಕಛೇರಿ ಸರ್ಕಾರಿ ಶಾಲೆಯ ಕಟ್ಟಡಕ್ಕೆ  ಹೊಂದಿಕೊಂಡಂತೆ ಇದ್ದು ಪಂಚಾಯಿತಿಯವರು ನೂತನ ಆಡಳಿತ ಕಛೇರಿ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಪರಿಹಾರ ನೀಡಲು ತಹಶೀಲ್ದಾರ್‌ರೊಂದಿಗೆ ತಾವು ಸ್ಥಳ ಪರಿಶೀಲನೆ ಮಾಡಿ ೧೨ ಗುಂಟೆ ನಿವೇಶನದಲ್ಲಿ ತಲಾ ೬ ಗುಂಟೆ ವಿಭಾಗ ಮಾಡಿಸಿ ದಾಖಲಾತಿ ನೀಡಲಾಗುತ್ತದೆ ಆ ನಂತರ ಆಡಳಿತ ಮಂಡಳಿ ಸಭೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ನಿರ್ಣಯ ಮಾಡಬೇಕು ಎಂದು ಪಿಡಿಒ ರಮೇಶ್ ಅವರಿಗೆ ತಾಕೀತು ಮಾಡಿದರು.

ಕಾಳೇನಹಳ್ಳಿ ಗ್ರಾಮದ ಪೌರಕಾರ್ಮಿಕರು ಹಾಲಿ ಇರುವ ಮನೆಗಳನ್ನು ತೆರವು ಮಾಡಿ ಆದರ್ಶ ಶಾಲೆಯ ಹಿಂಭಾಗ ೧೭ ಮಂದಿಗೆ ನಿವೇಶನ ನೀಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಫಲಾನುಭವಿಗಳು ಅದು ಸೂಕ್ತ ಸ್ಥಳವಲ್ಲ ಎಂಬ ಕಾರಣ ಹೇಳುತ್ತಿದ್ದಾರೆ ಎಂದು ಪಿಡಿಒ ರಮೇಶ್ ಶಾಸಕರಿಗೆ ಮಾಹಿತಿ ನೀಡಿದರು ಸದರಿ ಸ್ಥಳದ ಹತ್ತಿರ ಸ್ಮಶಾನ ಇರುವುದರ ಜತೆಗೆ ಕೆರೆ ಇರುವುದರಿಂದ ಸದಾ ತೇವಾಂಶ ಇರುವ ಜಾಗವಾದ್ದರಿಂದ ಮನೆ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ನಿರ್ಣಯ ಮಾಡಿ ಹಳೇಯ ಆದೇಶವನ್ನು ರದ್ದುಗೊಳಿಸುವಂತೆ ಸೂಚಿಸಿದರು.

ಇದೇ ಸಂಧರ್ಭದಲ್ಲಿ ಅಭಿವೃದ್ದಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಂಘದ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಸಂತೋಷ್‌ಕುಮಾರ್, ಇಒ ಬಿ.ಕೆ.ಮನು, ನರೇಗಾ ಅಧಿಕಾರಿಗಳಾದ ನೇತ್ರಾವತಿ, ಭರತ್, ತಾಲೂಕು ಪಂಚಾಯಿತಿ ಸಿಬ್ಬಂದಿಗಳಾದ  ಕರಿಗೌಡ, ಅನಿತಾ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular