Friday, April 18, 2025
Google search engine

Homeಸ್ಥಳೀಯಹಸು ಸಾಕಾಣಿಕೆಯಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ: ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ವೈ.ಡಿ. ರಾಜಣ್ಣ

ಹಸು ಸಾಕಾಣಿಕೆಯಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ: ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ವೈ.ಡಿ. ರಾಜಣ್ಣ

ಸರಗೂರು: ಹಸು ಸಾಕಾಣಿಕೆಯಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ವೈ.ಡಿ ರಾಜಣ್ಣ ತಿಳಿಸಿದರು
ಕೃಷಿಯಲ್ಲಿ ಸಮಗ್ರ ಬೇಸಾಯ ಮಾಡುವುದರಿಂದ ಉತ್ತಮ ರೀತಿಯ ಆದಾಯ ಗಳಿಸುವುದರ ಕುರಿತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಕೌಶಲ್ಯ ಅಭಿವೃದ್ದಿ ತರಬೇತಿ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ಕೆಂಚನಹಳ್ಳಿ ವತಿಯಿಂದ ಹಳೆಯೂರು ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಕಾರದಲ್ಲಿ, ಟೆಕ್ಸಸ್ ಇಂಸ್ಟ್ರುಮೆಂಟ್ ಸಹಯೋಗದೊಂದಿಗೆ ೩ ದಿನಗಳ ಹಸು ಸಾಕಾಣಿಕೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪ್ರಾರಂಭದ ಕಾರ್ಯಕ್ರಮವನ್ನು ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಯಾದ ಡಾ. ವೈ ಡಿ ರಾಜಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಸು ಸಾಕಾಣಿಕೆ ಮಾಡುವುದರಿಂದ ಮನೆಯಲ್ಲಿ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು, ಬಾಣಂತಿಯರು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ. ಎಂದಿಗೂ ಕೂಡ ಹಸುವಿನ ಹಾಲಿಗೆ ಬೇಡಿಕೆ ಕಡಿಮೆಯಾಗಿಲ್ಲ. ಟಮೋಟೊ, ಈರುಳ್ಳಿ, ಮುಂತಾದ ತರಕಾರಿ ಬೆಳೆಗಳನ್ನು ಬೆಳೆದು ಒಳ್ಳೆಯ ಬೆಲೆ ಸಿಗದಿರುವುದುಂಟು. ಆದರೆ ಹಸುವಿನ ಹಾಲು ಹಾಲಿನಿಂದ ಬರುವ ಉತ್ಪನ್ನಗಳು ಹೆಚ್ಚಾಗುತ್ತಲೆ ಇದೆ, ಪ್ರತಿ ದಿನ ಹಾಲಿನ ಬೆಲೆ ಏರಿಕೆ ಆಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲವೆಂದು ಹಾಲಿನ ಮಹತ್ವವನ್ನು ತಿಳಿಸಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ಪ್ರಸನ್ನ ಮಾತನಾಡಿ ಹಸು ಸಾಕಾಣಿಕೆ ಮಾಡುವುದರ ಮೂಲ ಉದ್ದೇಶ ಉತ್ತಮ ರೀತಿಯ ಹಾಲಿನ ಇಳುವರಿ ಪಡೆಯುವುದು. ಹಾಲಿನ ಇಳುವರಿ ಪಡೆಯುವಲ್ಲಿ ಒಳ್ಳೆಯ ಹಸುವಿನ ತಳಿ. ಸಮತೋಲನ ಆಹಾರದ ಪೂರೈಕೆ, ಉತ್ತಮ ರಾಸುವಿನ ಆಯ್ಕೆ, ಕೊಟ್ಟಿಗೆ ನಿರ್ಮಾಣ ಮತ್ತು ನಿರ್ವಹಣೆ, ಹಸುಗಳ ಪೋಷಣೆ, ಕರುಗಳ ಪೋಷಣೆ, ಆರೋಗ್ಯ ಸಮಸ್ಯೆಗಳು, ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದೆಂದರು.
ತರಬೇತಿಯ ಕೊನೆಯ ದಿನzಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಕ್ಷೇತ್ರಭೇಟಿಗಾಗಿ ಮೈಸೂರಿನ ಮೈಮೂಲಿಗೆ ಭೇಟಿ ನೀಡಿ ಪ್ರಭುಶಂಕರ್ ನೇತೃತ್ವದಲ್ಲಿ ಮೇವಿನ ತಳಿಗಳ ಬಗ್ಗೆ ಮಾಹಿತಿ ಪಡೆದು, ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಡಾ. ರಕ್ಷಿತ್ ರಾಜ್ ನೇತೃತ್ವದಲ್ಲಿ ವಿವಿಧ ರೀತಿಯ ಹಸುಗಳ ತಳಿಗಳನ್ನು ನೋಡಲಾಯಿತು. ನಂತರ ಹೆಚ್.ಡಿ,ಕೋಟೆ ತಾಲ್ಲೂಕಿನ ಮೂರ್‌ಬಂದ್ ಗ್ರಾಮದ ಬಾಬು ಫಾರ್ಮ್‌ಗೆ ಭೇಟಿನೀಡಿ ಹಸುಗಳು, ಕೊಟ್ಟಿಗೆ ನಿರ್ವಹಣೆ ಮತ್ತು ನಿರ್ಮಾಣ, ಮೇವಿನ ನಿರ್ವಹಣೆ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ತಿಳಿದುಕೊಂಡು ಅಂತಿಮವಾಗಿ ಯಶಸ್ವಿಯಾಗಿ ೩ ದಿನದ ತರಬೇತಿಯನ್ನು ಪೂರ್ಣಗೊಳಿಸಿದ ೪೬ ಅಭ್ಯರ್ಥಿಗಳಿಗೆ ವಿವೇಕಾ ಗ್ರಾಮೀಣ ಜೀವನಾಧಾರ ಕೇಂದ್ರ ಕೆಂಚನಹಳ್ಳಿಯಲ್ಲಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ಕೆಂಚನಹಳ್ಳಿಯ ಸಹಾಯಕ ವ್ಯವ್ಥಪಾಕ ಪ್ರಸನ್ನ, ಗ್ರಾಮ ಪಂಚಾಯಿತಿಯ ಸದ್ಯಸ್ಯ ಸತೀಶ್, ಯಾಜಮಾನ ಚಂದ್ರಪ್ಪ, ನಾಗರಾಜಪ್ಪ ಹಾಗೂ ಹಾಲು ಉತ್ಪಾದಕಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶಶಿರೇಖಾ, ಕಾರ್ಯದರ್ಶಿ ವೇದಾವತಿ ಉಪಸ್ಥಿತರಿದ್ದರು.
ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ವ್ಯವ್ಥಪಾಕ ಪಿ.ಡಿ ನಾಯಕ್, ಸಹಾಯಕ ವ್ಯವ್ಥಪಾಕರಾದ ಪ್ರಸನ್ನ, ಕ್ಷೇತ್ರಮಾರ್ಗದರ್ಶಕ ಉಮೇಶ್ ಬಿ.ಎನ್, ರಂಗಸ್ಡಾಮಿ ಹಾಗೂ ಯಶೋದ ಹಾಜರಿದ್ದರು.

RELATED ARTICLES
- Advertisment -
Google search engine

Most Popular