Friday, April 4, 2025
Google search engine

HomeUncategorizedಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದೆ

ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದೆ

ಮೈಸೂರು: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಲೇ ಶೇ.೩೫ರಷ್ಟು ಸಾವುಗಳು ಸಂಭವಿತ್ತಿರುವುದುಆತಂಕಕಾರಿ ಬೆಳವಣಿಗೆಯಾಗಿದೆ ಎಂದುಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದಜಯದೇವಆಸ್ಪತ್ರೆಗೆ ಭೇಟಿ ನೀಡಿಕಾರ್ಯ ವೈಖರಿ ವೀಕ್ಷಿಸಿ, ರೋಗಿಗಳು ಹಾಗೂ ಸಂಬಂಧಿಕರೊಂದಿಗೆ ಮಾತನಾಡಿದಅವರು, ಆಸ್ಪತ್ರೆಯಲ್ಲಿನಗುಣಮಟ್ಟದಚಿಕಿತ್ಸೆ, ಸ್ವಚ್ಛತೆ, ವೈದ್ಯರು ಹಾಗೂ ಸಿಬ್ಬಂದಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರು.
ಬದಲಾದಜೀವನಶೈಲಿಯಿಂದಯುವಕರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದ್ದು, ಯುವಕರುಒತ್ತಡಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಗುಣಮಟ್ಟದಆಹಾರ ಸೇವಿಸಬೇಕು. ಪ್ರತಿದಿನ ೪೫ ನಿಮಿಷ ವ್ಯಾಯಮ ಮಾಡಬೇಕು. ೩೫ ವರ್ಷ ಮೇಲ್ಪಟ್ಟ ಪುರುಷರು, ೪೫ ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷಆರೋಗ್ಯತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯಎಲ್ಲ ವಿಭಾಗಗಳು ಸಮರ್ಪಕವಾಗಿ ಕೆಲಸ ಮಾಡುತಿದ್ದು, ಪ್ರತಿದಿನ ೭೦೦ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಿದ್ದಾರೆ. ಕುಟುಂಬಸ್ಥರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರುಎಚ್ಚರಿಕೆ ವಹಿಸಬೇಕು. ಹೆಚ್ಚಾಗಿ ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಇರುವವರು ನಿರ್ಲಕ್ಷಿಸಬಾರದುಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಲ ರೋಗಿಗಳ ಸಂಬಂಧಿಕರುಚಿಕಿತ್ಸೆಗೆರಿಯಾಯಿತಿ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಡಾ. ಸಿ.ಎನ್.ಮಂಜುನಾಥ್ ಅವರು, ಸ್ಥಳದಲ್ಲಿಯೇ ಆದೇಶ ನೀಡಿಚಿಕಿತ್ಸೆಗೆ ಸಹಕಾರ ನೀಡಿದರು.
ವೈದ್ಯಕೀಯಅಧೀಕ್ಷಕ ಡಾ.ಕೆ.ಎಸ್.ಸದಾನಂದ್, ವೈದ್ಯರಾದಡಾ.ಹರ್ಷ ಬಸಪ್ಪ, ಡಾ.ಸಂತೋಷ್, ಡಾ.ರಾಜೀತ್, ಡಾ.ದಿನೇಶ್, ಡಾ. ಹೇಮಾರವೀಶ್, ಡಾ.ಜಯಪ್ರಕಾಶ್, ಡಾ.ಭಾರತಿ, ಡಾ.ವೀಣಾನಂಜಪ್ಪ, ಡಾರಶ್ಮಿ, ಡಾ.ಶೀತಲ್, ಡಾ.ನವೀಣ್, ಡಾ.ಶ್ರೀನಿದಿ ಹೆಗ್ಗಡೆ, ಡಾ.ಹರ್ಷ, ಡಾ.ಅಶ್ವಿನಿ, ಡಾ.ದೇವರಾಜ್, ಸೈಂಟಿಫಿಕ್‌ಆಫಿಸರ್ ಪದ್ಮಾ, ಆರ್‌ಎಂಒ ಪಶುಪತಿ, ನಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಒ ವಾಣಿಮೋಹನ್, ಚಂಪಕಮಾಲಾ, ಸೈಯದ್, ಶಂಕರ್‌ಇದ್ದರು.

RELATED ARTICLES
- Advertisment -
Google search engine

Most Popular