ಇತ್ತೀಚೀನ ದಿನಗಳಲ್ಲಿ 18 ವರ್ಷ ದಾಟುತ್ತಿದ್ದಂತೆ ಬೊಜ್ಜು ಪ್ರಾರಂಭವಾಗುತ್ತದೆ. ಹೆಚ್ಚಿನವರಿಗೆ ತಾವು ಸೇವಿಸುವ ಆಹಾರದಲ್ಲಿ ಕ್ರಮವಿಲ್ಲದೇ ಇದ್ದಾಗ ದೇಹವು ಕೊಬ್ಬಿನಾಂಶದಿಂದ ಕೂಡುತ್ತದೆ. ಅದಕ್ಕಾಗಿ ಜಿಮ್‌ಗಳಿಗೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಕೆಲವರು ಆರ್ಥಿಕ ಸ್ಥಿತಿಯಲ್ಲಿ ಒದ್ದಾಡುತ್ತಿದ್ದು, ಜಿಮ್‌ಗೆ ಹೋಗದೇ ಬೊಜ್ಜು ಕರಗಿಸಬಹುದು.
ಸಕ್ಕರೆ ಮಿಶ್ರಿತ ತಿನಿಸುಗಳಾದ ಬೇಕರಿ ತಿನಿಸುಗಳು, ಐಸ್‍ಕ್ರೀಮ್‍ಗಳಿಂದ, ಸಿಹಿ ತಿಂಡಿ,ಆಹಾರಪದಾರ್ಥ, ಎಣ್ಣೆಯಿಂದ ಕೂಡಿದ ಆಹಾರಗಳಿಂದ ದೂರ ಇದ್ದರೇ ಸುಲಭವಾಗಿ ಬೊಜ್ಜು ಕರಗಿಸಬುಹುದಾಗಿದೆ.
ಬೆಳಗಿನ ಸಮಯದಲ್ಲಿ ಬೆಚ್ಚಗಿನ ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹದ ಕೊಬ್ಬನ್ನು ಹೊರ ಹಾಕಲು ಸಹಕರಿಸುತ್ತದೆ.
ದಿನಕ್ಕೆ ಕನಿಷ್ಠ ಪಕ್ಷ ಒಂದು ಗಂಟೆಯಾದರೂ ನಡೆಯುವ ಅಭ್ಯಾಸ ಮಾಡಿಕೊಂಡರೇ ದೇಹದ ರಕ್ತ ಸಂಚಲನದ ಜೊತೆಗೆ ಬೊಜ್ಜು ಕರಗಿಸುತ್ತದೆ.
ನಾವು ಮಾಡುವ ಕೆಲಸದಲ್ಲಿ ಒತ್ತಡ ಇದ್ದರೇ ಅಂಥಹ ಸಂದರ್ಭದಲ್ಲಿ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿ ಒಂದುಷ್ಟು ನೀಡುವುದರಿಂದ ದೇಹದ ಅನವಶ್ಯಕ ತ್ಯಾಜ್ಯಗಳನ್ನು ಹೊರ ಹಾಕಿ ಆರೋಗ್ಯವನ್ನು ಕಾಪಾಡುತ್ತದೆ.
ವೈದ್ಯರ ಸಲಹೆಯಂತೆ ಪ್ರತಿನಿತ್ಯ ವ್ಯಾಯಮ ಅಭ್ಯಾಸ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಜೊತೆಗೆ ದೇಹದ ಅನವಶ್ಯಕ ಕೊಬ್ಬು ಕರಗಿಸುತ್ತದೆ. ಇವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.