೨೦೨೧-೨೨ನೇ ಸಾಲಿನ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ

0


ಮೈಸೂರು: ಶಿPಣದೊಂದಿಗೆ ವ್ಯಕ್ತಿತ್ವ ವಿಕಸನ ಹಾಗೂ ಸಮಾಜ ಸೇವೆಯ ಉzಶ ಹೊಂದಿರುವ ರಾಷ್ಟ್ರೀಯ ಸೇವಾ ಯೋಜನೆ ದೊಡ್ಡ ಶಕ್ತಿಯಾಗಿ ಬೆಳೆದಿದ್ದು, ಮೌಲ್ಯ ಹಾಗೂ ಸಹಬಾಳ್ವೆ ಕಲಿಸುತ್ತಿದೆ. ಮೌಲ್ಯಗಳನ್ನು ಕಲಿಯದಿದ್ದರೆ ಪದವಿ ಪ್ರಮಾಣಪತ್ರಗಳಿಗೆ ಬೆಲೆ ಇರುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎನ್‌ಎಸ್‌ಎಸ್ ಕೋಶದ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸರಸ್ವತಿಪುರಂನ ಎನ್‌ಎಸ್‌ಎಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ೨೦೨೧-೨೨ನೇ ಸಾಲಿನ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಮಾದರಿಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಗೆ ಸಮಾಜ ಬದಲಿಸುವ ಶಕ್ತಿ ಇದೆ. ಮೈಸೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ನೀಡಿದ ಅನುದಾನವನ್ನೆಲ್ಲ ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಕಾರ್ಯ ಮಾಡುತ್ತಿದ್ದು, ಎಲ್ಲ ಚಟುವಟಿಕೆಗಳನ್ನು ಮಾಡುತ್ತಿದೆ. ಹೀಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ ಎಂದರು.
ಪ್ರಶಸ್ತಿ ಪ್ರದಾನ: ಇದೇ ವೇಳೆ ವಿಶ್ವವಿದ್ಯಾಲಯ ಮಟ್ಟದ ನಾನಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ಉತ್ತಮ ಘಟಕ ಪ್ರಶಸ್ತಿಯನ್ನು ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜು ಹಾಗೂ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ನೀಡಲಾಯಿತು. ಉತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜಿನ ಡಿ.ಸುರೇಶ್ ಬಾಬು ಮತ್ತು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಡಾ.ಕೆ.ಇ.ಗೋವಿಂದೇಗೌಡ ಅವರಿಗೆ ನೀಡಲಾಯಿತು. ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಹುಣಸೂರು ತಾಲೂಕಿನ ರತ್ನಾಪುರಿಯ ವಿ.ಎಸ್.ಎಸ್.ಪ್ರಥಮ ದರ್ಜೆ ಕಾಲೇಜಿನ ಪ್ರಮೋದ್ ಹಾಗೂ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀಕಂಠಮೂರ್ತಿ ಅವರಿಗೆ ನೀಡಲಾಯಿತು. ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಡಿ.ಪಿ.ಸುಶ್ಮಿತ ಹಾಗೂ ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಎ.ತನುಶ್ರೀ ಅವರಿಗೆ ನೀಡಲಾಯಿತು.
ಉ.ಕಾ.ಸುಬ್ಬರಾಯಚಾರ್ ಸ್ಮರಣಾರ್ಥ ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಮೈಸೂರಿನ ಜ್ಞಾನದೀಪ ಪ್ರಥಮ ದರ್ಜೆ ಕಾಲೇಜಿನ ಸಿ.ಜೆ.ಪ್ರಜ್ವಲ್ ಹಾಗೂ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಜೆ.ದಕ್ಷತ್ ಅವರಿಗೆ ನೀಡಲಾಯಿತು. ಉ.ಕಾ.ಸುಬ್ಬರಾಯಚಾರ್ ಸ್ಮರಣಾರ್ಥ ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಡಿ.ಶಾರದಾ ಮತ್ತು ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮೋದಿನಿ ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಲಪತಿ ಎನ್.ಕೆ.ಲೋಕನಾಥ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ಬಿ.ಚಂದ್ರಶೇಖರ, ಡಾ.ಎಂ.ಬಿ.ಸುರೇಶ್, ಸಲಹಾ ಸಮಿತಿ ಸದಸ್ಯರಾದ ಪ್ರೊ.ಬಿ.ಕೆ.ಜಗದೀಶ್, ಪ್ರೊ.ಶಿವರಾಜ, ಪ್ರೊ.ಎಂ.ರುದ್ರಯ್ಯ, ಪ್ರೊ.ಕೆ.ಟಿ.ವೀರಪ್ಪ, ಪ್ರೊ.ವೀರಯ್ಯ, ಪ್ರೊ.ಸತ್ಯನಾರಾಯಣ ಇತರರಿದ್ದರು.