ಮೈಸೂರು: ಹೈನುಗಾರಿಕೆಯನ್ನುಕೋಟ್ಯಾಂತರರೈತರು ಅವಲಂಬಿಸಿರುವ ಜತೆಗೆ ಹಲವಾರುರೂಪದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತಿರುವುದರಿಂದ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ ಕೆಪಿಎಸ್‌ಸಿ ಮೂಲಕ ೪೦೦ ಪಶುವೈದ್ಯರನ್ನು ನೇಮಕ ಮಾಡಲುಆದೇಶ ನೀಡಲಾಗಿದೆಎಂದು ಪಶು ಸಂಗೋಪನಾ ಮತ್ತುರೇಷ್ಮೆ ಸಚಿವಕೆ.ವೆಂಕಟೇಶ್ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಮೂಕಪ್ರಾಣಿಗಳ ಸೇವೆ ಮಾಡುವಂತಹಖಾತೆಯನ್ನು ನೀಡಿದ್ದು, ಇಲಾಖೆಗೆ ಹೊಸ ರೂಪಕೊಟ್ಟು ಹೈನುಗಾರಿಕೆಯನ್ನುಉತ್ತೇಜಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಪಶುಸಂಗೋಪನಾ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆಇದೆ. ರಾಜ್ಯದಲ್ಲಿ ವೈದ್ಯರು, ಸಿಬ್ಬಂದಿ ಸೇರಿ ೧೮ ಸಾವಿರ ಹುದ್ದೆಗಳಿದ್ದು, ಅದರಲ್ಲಿ ೯ಸಾವಿರ ಹುದ್ದೆಗಳು ಖಾಲಿ ಇವೆ. ೪೨೩೦ ಪಶುಚಿಕಿತ್ಸಾ ಆಸ್ಪತ್ರೆಗಳಿದ್ದದು, ೧೬೦೦ ವೈದ್ಯರಕೊರತೆಇದೆ. ಹಾಗಾಗಿ, ತಕ್ಷಣವೇಕರ್ನಾಟಕ ಲೋಕಸೇವಾ ಆಯೋಗದ ಮೂಲಕ ೪೦೦ ವೈದ್ಯರನ್ನು ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲುಆದೇಶ ನೀಡಲಾಗಿದೆಎಂದರು.ಮೊದಲು ಮೆರಿಟ್‌ಆಧಾರದ ಮೇಲೆ ನೇಮಕಾತಿ ಮಾಡುವ ಪ್ರಕ್ರಿಯೆಇತ್ತು.ಆದರೆ, ಈಗ ಪರೀಕ್ಷೆ ಮೂಲಕ ಆಯ್ಕೆ ನಡೆಸುವಂತೆಒತ್ತಡ ಬಂದಿದ್ದರಿಂದ ಪರೀಕ್ಷೆಜವಾಬ್ದಾರಿಯನ್ನು ಕೆಪಿಎಸ್‌ಸಿಗೆ ವಹಿಸಲಾಗಿದೆ. ಮುಂದೆ ಉಳಿದ ವೈದ್ಯರುಗಳನ್ನು ನೇಮಿಸಲು ಪ್ರಯತ್ನ ನಡೆಸಲಾಗುವುದುಎಂದು ನುಡಿದರು. ಹಾಲು ಉತ್ಪಾದನೆ ಪ್ರಮಾಣ ಜಾಸ್ತಿಯಾಗಿದೆ. ಹೈನುಗಾರಿಕೆಗೆಉತ್ತೇಜನ ನೀಡಿದರೆರೈತರಿಗೆ ಅನುಕೂಲವಾಗುತ್ತದೆ. ಈಗ ಪ್ರತಿ ಲೀಟರ್ ಹಾಲಿಗೆ ಸರ್ಕಾರ ೫ ರೂ.ಪ್ರೋತ್ಸಾಹಧನ ನೀಡುತ್ತಿದ್ದು,ಬೇರೆರೀತಿಯಲ್ಲಿ ಪ್ರೋತ್ಸಾಹಧನ ಸಿಗುವಂತೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಘುವುದುಎಂದರು.
ಸರ್ಕಾರದಿಂದಗೂಡುಖರೀದಿ: ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸುವ ಜತೆಗೆತಂಬಾಕು ಬೆಳೆಗೆ ಪರ್ಯಾಯವಾಗಿರೇಷ್ಮೆ ಬೆಳೆಯಲು ಉತ್ತೇಜಿಸಲಾಗುವುದು. ರೇಷ್ಮೆಗೂಡಿನದರ ಇಳಿಕೆಯಾಗಿರುವ ಬಗ್ಗೆ ರೈತರು ಬಂದು ಹೇಳಿದ್ದರಿಂದ ಕರ್ನಾಟಕರೇಷ್ಮೆ ಮಾರುಕಟ್ಟೆ ಬೋರ್ಡ್‌ನಿಂದಲೇಖರೀದಿಸುವ ಪ್ರಕ್ರಿಯೆಯನ್ನು ಮೊನ್ನೆಯಿಂದ ಶುರು ಮಾಡಲಾಗಿದೆ. ರಾಮನಗರ,ಕೋಲಾರ,ಚಿಕ್ಕಬಳ್ಳಾಪುರ,ದೊಡ್ಡಬಳ್ಳಾಪುರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಇದನ್ನು ವಿಸ್ತರಿಸಬೇಕಿದೆ. ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಭಾಗದಲ್ಲಿತಂಬಾಕಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು. ರೇಷ್ಮೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮುಂದೆ ಏನು ಮಾಡಬಹುದುಎಂಬುದರ ಬಗ್ಗೆ ಚರ್ಚಿಸುವೆಎಂದರು.
ಚರ್ಚೆಆಗಿಲ್ಲ: ಬಿಜೆಪಿ ಸರ್ಕಾರದಲ್ಲಿಜಾರಿಗೆತಂದಿರುವಗೋಹತ್ಯೆ ನಿಷೇಧಕಾಯ್ದೆ ಬಗ್ಗೆ ಚರ್ಚೆ ಮಾಡಿಲ್ಲ. ಮುಂದೆಚರ್ಚೆ ಮಾಡುತ್ತೇವೆಎಂದರು. ಎಮ್ಮೆ,ಕೋಣವನ್ನುಕಡಿಯಬಹುದು.ಆದರೆ, ವಯಸ್ಸಾದ ಹಸು ಕಡಿಯಬಾರದೆಂದು ಹೇಳಲಾಗಿದೆ. ಎಮ್ಮೆ,ಕೋಣವನ್ನೇಕಡಿದಾಗ ಹಸು ಯಾಕೆಕಡಿಯಬಾರದೆಂದು ವೆಂಕಟೇಶ್ ಪ್ರಶ್ನಿಸಿದರು. ನಾವೇ ಮೂರು ಹಸುಗಳನ್ನು ಸಾಕುತ್ತಿದ್ದೇವು. ಒಂದು ಹಸು ತೀರಿ ಹೋದಾಗ ಏನು ಮಾಡಬೇಕೆಂದು ವೈದ್ಯರನ್ನು ಕೇಳಿದಾಗ ಹೂಳು ಮಾಡಿಬಿಡಿಅಂದಿದ್ದರು. ಮೃತ ಹಸುವನ್ನು ೨೫ಮಂದಿ ಎತ್ತಿದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಹೂಳು ಮಾಡಲಾಯಿತು. ಹಾಗಾಗಿ, ಮೊದಲು ಈ ಬಗ್ಗೆ ಚರ್ಚೆ ಮಾಡಬೇಕಿದೆಎಂದರು. ಕರ್ನಾಟಕಕ್ಕೆಆಮುಲ್ ಬಂದಿಲ್ಲ. ಬಂದ ಮೇಲೆ ನೋಡೋಣ. ಆಮುಲ್‌ನ್ನುಎದುರಿಸುತ್ತೇವೆ. ನಮ್ಮರೈತರ ಪರವಾಗಿ ನಾವು ಇರಬೇಕು. ಈಗ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡೋದು ಬೇಡಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಜತೆಚರ್ಚೆ: ಪಶುಸಂಗೋಪನಾ ಇಲಾಖೆ ದೊಡ್ಡದಾದರೂ ಬರುತ್ತಿರುವಅನುದಾನ ಮಾತ್ರಕಡಿಮೆಯಾಗಿರುವಕಾರಣ ಸಿಎಂ ಜತೆಚರ್ಚೆ ನಡೆಸುವೆಎಂದರು. ಮುಖ್ಯಮಂತ್ರಿಗಳು ಮೊದಲುಇಲಾಖೆಯ ಸಚಿವರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ,ಹೆಚ್ಚಿನಅನುದಾನಕೊಡುವಂತೆ ಮನವಿ ಮಾಡುವೆಎಂದರು. ಮೈಸೂರುಜಿಲ್ಲೆಯಅಭಿವೃದ್ಧಿಗೆ ಮತ್ತು ಮುಂದೆಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಸಿಎಂ ಅವರನ್ನು ಬಳಸಿಕೊಳ್ಳಲಾಗುವುದು. ಜಿಲ್ಲೆಯವರೇಆಗಿದ್ದಡಿ.ದೇವರಾಜಅರಸು ನಂತರ ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ.ಈಗಲೂ ಸಿಎಂ ಆಗಿರುವಕಾರಣ ಹೆಚ್ಚಿನ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದುಎಂದರು. ಮೈಸೂರುಗ್ರಾಮಾಂತರಜಿಲ್ಲಾಕಾಂಗ್ರೆಸ್‌ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್,ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಪಂ ಮಾಜಿಅಧ್ಯಕ್ಷ ಬಿ.ಎಂ.ರಾಮು, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ,ಮಾಜಿ ಮಹಾಪೌರ ಬಿ.ಕೆ.ಪ್ರಕಾಶ್, ದ್ಯಾವಪ್ಪನಾಯಕ,ಈಶ್ವರ್‌ಚಕ್ಕಡಿಇನ್ನಿತರರು ಹಾಜರಿದ್ದರು.
೪೦೦ ಪಶುವೈದ್ಯರ ನೇಮಕಕ್ಕೆ ಆದೇಶ: ವೆಂಕಟೇಶ್
RELATED ARTICLES