ಮೈಸೂರು: ಕೇಂದ್ರ ಸರ್ಕಾರದಆಯುಷ್ ಮಂತ್ರಾಲಯ, ನವದೆಹಲಿಯ ಮೊರಾರ್ಜಿದೇಸಾಯಿರಾಷ್ಟ್ರೀಯಯೋಗ ಸಂಸ್ಥೆ, ಮಹಾಜನ ಶಿಕ್ಷಣ ಸಂಸ್ಥೆ ಹಾಗೂ ವೇದವ್ಯಾಸಯೋಗ ಪ್ರತಿಷ್ಠಾನ ಸಹಯೋಗದೊಂದಿಗೆಜೂ. ಆರರಂದುಅಂತರರಾಷ್ಟ್ರೀಯಯೋಗ ದಿನದ ಪೂರ್ವಭಾವಿ ಚಟುವಟಿಕೆಯಾಗಿರಾಷ್ಟ್ರೀಯಯೋಗೋತ್ಸವಆಯೋಜಿಸಲಾಗಿದೆಎಂದು ಪ್ರಾಚಾರ್ಯಡಾ.ಬಿ.ಆರ್.ಜಯಕುಮಾರಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ಏಳಕ್ಕೆ ಜಯಲಕ್ಷ್ಮೀಪುರಂನ ಮಹಾಜನ ಪ್ರಥಮದರ್ಜೆಕಾಲೇಜಿನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಜಿ ೯೦ ದೇಶಗಳ ಸಾರಥ್ಯವನ್ನು ವಹಿಸಿರುವ ಭಾರತವು ಈ ವರ್ಷದಯೋಗೋತ್ಸವವನ್ನು ವಸುದೈವಯೋಗಕುಟುಂಬವಾಗಿ ಆಚರಿಸಲು ಯೋಜಿಸಿದೆ. ಪ್ರತಿ ಮನೆ, ಬೀದಿ, ನಗರ, ಶಾಲೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಎಲ್ಲರೂಯೋಗಕಲಿಯಲು ಪ್ರೇರಣೆ ಪಡೆಯಲೆಂದು ಆಶಿಸಲಾಗಿದೆ. ಇನ್ನು, ಈ ಕಾರ್ಯಕ್ರಮವನ್ನು ಮೇಯರ್ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ್‌ಸಿಂಹ, ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಟಿ. ಮುರಳೀಧರ ಭಾಗವತ್, ವೇದವ್ಯಾಸಯೋಗ ಪ್ರತಿಷ್ಠಾನದಗೌರವ ಕಾರ್ಯದರ್ಶಿ ಡಾ.ಕೆ. ರಾಘವೇಂದ್ರ ಪೈ ಭಾಗವಹಿಸಲಿದ್ದಾರೆಂದರು.
ಡಾ.ವಿಜಯಲಕ್ಷ್ಮೀ ಮುರಳೀಧರ್, ಡಾ.ಎಚ್.ಆರ್. ತಿಮ್ಮೇಗೌಡ, ರಾಘವೇಂದ್ರ ಪೈ, ಶಮಿಕಾ ಶ್ರೀಹರಿ ಹಾಜರಿದ್ದರು. |
|
|