ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿಯು ೧೨ ನೇ ಆವೃತ್ತಿಯ ಟೈಗರ್ ಕಪ್ ೨೦೨೪ ಅನ್ನು ಆಯೋಜಿಸುತ್ತಿದೆ, ಈ ಸ್ಪರ್ಧೆಯು ಬೆಂಗಳೂರಿನಲ್ಲಿ ಮೇ ೧೩ ರವರೆಗೆ ನಡೆಯಲಿದೆ. ೧೨ ವರ್ಷದೊಳಗಿನವರು, ೧೪ ವರ್ಷದೊಳಗಿನವರು ಮತ್ತು ೧೬ ವರ್ಷದೊಳಗಿನವರ ವಿಭಾಗಗಳಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯು ಈ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ
ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಚನ್ನಸಂದ್ರದ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿ, ಪಟ್ಟಣಗೆರೆಯ ಸತ್ವ ಗ್ಲೋಬಲ್ ಸಿಟಿ ಮತ್ತು ಬೊಮ್ಮಸಂದ್ರದ ಬಿ ಕೆ ಮೈದಾನ. ಯುವ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಮತ್ತು ಈ ಪ್ರದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ, ಮೈಸೂರು ಮತ್ತು ಕೇರಳದ ತಂಡಗಳು ಭಾಗವಹಿಸಲಿವೆ. ಹಲವು ವರ್ಷಗಳಿಂದ ಟೈಗರ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಅನೇಕ ಉದಯೋನ್ಮುಖ ಕ್ರಿಕೆಟಿಗರು ಕರ್ನಾಟಕ ಅಂಡರ್ ೧೪, ಅಂಡರ್೧೬ ಮತ್ತು ಅಂಡರ್೧೯ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದಾರೆ.
ಖ್ಯಾತ ಕ್ರಿಕೆಟ್ ಆಟಗಾರರಾದ ಸಂದೀಪ್ ಪಾಟೀಲ್, ಹರ್ಭಜನ್ ಸಿಂಗ್ ಮತ್ತು ಯೂಸುಫ್ ಪಠಾಣ್ ಅವರಿಂದ ಸೃಷ್ಟಿಸಲ್ಪಟ್ಟು ಟೈಗರ್ ಕಪ್ ಪಂದ್ಯಾವಳಿಯಲ್ಲಿ ಭಾರತದಾದ್ಯಂತ ಇರುವ ೯೦೦ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುತ್ತಾರೆ. ಬಹು ನಿರೀಕ್ಷಿತ ಪಂದ್ಯಾವಳಿಗಳಲ್ಲಿ ಇದು ಒಂದಾಗಿದ್ದು, ೫೬ ಪ್ರತಿಭಾವಂತ ತಂಡಗಳು ಭಾಗವಹಿಸಲಿವೆ. ೧೨ನೇ ಆವೃತ್ತಿಯ ಟೈಗರ್ ಕಪ್ ೨೦೨೪ ವನ್ಯಜೀವಿಗಳನ್ನು ಸಂರಕ್ಷಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸಮರ್ಪಿತವಾಗಿದೆ. ಈ ಪಂದ್ಯಾವಳಿಯಿಂದ ಬರುವ ಆದಾಯವನ್ನು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅರಣ್ಯ ಕಾಲಾಳುಗಳಿಗೆ ಬೆಂಬಲ ಸೂಚಿಸಲು ದೇಣಿಗೆ ನೀಡಲಾಗುತ್ತದೆ.
ವಾರ್ಷಿಕವಾಗಿ ನಡೆಯುವ ಈ ಪಂದ್ಯಾವಳಿಯು ಯುವ ಪ್ರತಿಭಾವಂತ ಆಟಗಾರರ ಸಂಭ್ರಮಿಸುವ ಉದ್ದೇಶ ಹೊಂದಿರುವುದರ ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿಯ ಸಹಭಾಗಿತ್ವದ ಮೂಲಕ ಅರಣ್ಯ ಸಿಬ್ಬಂದಿಗೆ ಅನುಕೂಲ ಒದಗಿಸಲಿದೆ. ಕರ್ನಾಟಕದ ೨, ಕೇರಳದ ೧ ಮತ್ತು ತಮಿಳುನಾಡಿನ ೧ ಅರಣ್ಯ ಸಿಬ್ಬಂದಿಗಳು ವನ್ಯಜೀವಿ ರಕ್ಷಣೆಗೆ ಅವರು ನೀಡಿದ ಅಪೂರ್ವ ಕೊಡುಗೆಗಾಗಿ ತಲಾ ೧ ಲಕ್ಷ ನಗದು ಬಹುಮಾನವನ್ನು ಪಡೆಯುತ್ತಾರೆ.
ಈ ಕುರಿತು ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ, ೧೨ನೇ ಆವೃತ್ತಿಯ ಟೈಗರ್ ಕಪ್ ೨೦೨೪ರಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಪ್ರಮುಖ ಪಾತ್ರವನ್ನು ವಹಿಸಲು ಹೆಮ್ಮೆಪಡುತ್ತದೆ. ಇದು ಉದಯೋನ್ಮುಖ ಕ್ರೀಡೋತ್ಸಾಹಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನುದೃಢೀಕರಿಸುತ್ತದೆ. ಯುವ ಪ್ರತಿಭೆಗಳ ಜೀವನವನ್ನು ರೂಪಿಸುವಲ್ಲಿ ಕ್ರೀಡೆಗಳು ವಹಿಸುವ ಪಾತ್ರವನ್ನು ಒತ್ತಿಹೇಳುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಪರಿಸರ ಸಂರಕ್ಷಣೆಯ ಕುರಿತಾಗಿ ನಾವು ಹೊಂದಿರುವ ಬದ್ಧತೆಗೆ ಅನುಗುಣವಾಗಿ, ಈ ವರ್ಷದ ಕ್ರಿಕೆಟ್ ಪಂದ್ಯಾವಳಿಯು ಅರಣ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಅರಣ್ಯ ಸೈನಿಕರಿಗೆ ಗೌರವ ಸಲ್ಲಿಸುವ ಅವಕಾಶವನ್ನು ಒದಗಿಸುತ್ತಿದೆ ಎಂದು ಹೇಳಿದರು.
ಲೆಗಸಿ ಬ್ರ್ಯಾಂಡ್ ಸೈಕಲ್ ಪ್ಯೂರ್ ಅಗರಬತ್ತಿಯು ಭಾರತದಾದ್ಯಂತ ಹೆಚ್ಚು ಸಂಭ್ರಮಿಸುವ ಕ್ರೀಡೆಯಲ್ಲಿ ಸ್ಪರ್ಧಿಸುವ ಮತ್ತು ಯುವ ಪ್ರತಿಭೆಗಳನ್ನು ಅನ್ವೇಷಿಸಲು ವೇದಿಕೆಯನ್ನು ಒದಗಿಸುವ ತನ್ನ ನಿಲುವಿನಲ್ಲಿ ಬದ್ಧವಾಗಿದೆ. ಸೈಕಲ್ ಪ್ಯೂರ್ ಅಗರಬತ್ತಿಯು ಹಲವು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಹಲವು ವರ್ಷಗಳಿಂದ ಬೆಂಬಲಿಸುತ್ತಾ ಬಂದಿದೆ ಮತ್ತು ೧೨ನೇ ಆವೃತ್ತಿಯ ಟೈಗರ್ ಕಪ್ ೨೦೨೪ರೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷ ಹೊಂದಿದೆ. ಪಂದ್ಯಾವಳಿ ಸುಗಮವಾಗಿ ನಡೆಯಲು ಮತ್ತು ಪಂದ್ಯಾವಳಿಯುದ್ದಕ್ಕೂ ಅಪಾರ ನೆರವು ನೀಡಿದ ಕೆಎಸ್‌ಸಿಎಗೆ, ಅದರಲ್ಲೂ ವಿಶೇಷವಾಗಿ ಬ್ರಿಜೇಶ್ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
ಎನ್‌ಆರ್‌ಗುಂಪಿನ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು http://www.nrgroup.co.in/ ಗೆ ಭೇಟಿ ನೀಡಿ