Saturday, April 19, 2025
Google search engine

Homeಅಪರಾಧಧರ್ಮಸ್ಥಳ ಗಾಮಾಭಿವೃದ್ಧಿ ಟ್ರಸ್ಟ್‌ ನಲ್ಲಿ 1.24 ಕೋಟಿ ಕಳವು: 10 ಆರೋಪಿಗಳ ಬಂಧನ

ಧರ್ಮಸ್ಥಳ ಗಾಮಾಭಿವೃದ್ಧಿ ಟ್ರಸ್ಟ್‌ ನಲ್ಲಿ 1.24 ಕೋಟಿ ಕಳವು: 10 ಆರೋಪಿಗಳ ಬಂಧನ

ಧಾರವಾಡ: ನಗರದ ರಾಯಾಪುರ ಧರ್ಮಸ್ಥಳ ಗಾಮಾಭಿವೃದ್ಧಿ ಟ್ರಸ್ಟ್‌ ನ (ಎಸ್‌ ಕೆಡಿಆರ್‌ ಪಿಡಿ) ತಾಲ್ಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿ ಇಟ್ಟಿದ್ದ 1.24 ಕೋಟಿ ಹಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸವಣೂರಿನ ಕುಶಾಲ ಕುಮಾರ (23), ನವಲಗುಂದದ ಬಸವರಾಜ (34), ಮಹಾಂತೇಶ (27), ಜಿಲಾನಿ (25), ಪರಶುರಾಮ (34), ರಂಗಪ್ಪ (31), ಮಂಜುನಾಥ (22), ಕಿರಣ (23), ರಜಾಕ್‌ ಅಹಮದ್‌ (31) ಹಾಗೂ ವೀರೇಶ (20) ಬಂಧಿತರು.

ಬಂಧಿತರಿಂದ 79.89 ಲಕ್ಷ ನಗದು, ಕೃತ್ಯಕ್ಕೆ ಬಳಸಿದ ಕಾರು, ಎರಡು ದ್ವಿಚಕ್ರವಾಹನ ಹಾಗೂ ನಾಲ್ಕು ಮೊಬೈಲ್‌ ಫೋನ್‌ ಗಳನ್ನು ವಶಪಡಿಸಿಕೊಂಡಿದ್ಧಾರೆ.

ಮಹಾನಗರ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಹಿಂದೆ ಕೆಲವು ಪ್ರಕರಣಗಳು ಇವೆ. ಕುಶಾಲ ಕುಮಾರ, ಬಸವರಾಜ, ಮಹಾಂತೇಶ ಈ ಮೂವರು ಎಸ್‌ ಕೆಡಿಆರ್‌ ಪಿಡಿ ಟ್ರಸ್ಟ್‌ ನ ನೌಕರರು. ಪ್ರಕರಣದಲ್ಲಿ ಇನ್ನು ಯಾರ‍್ಯಾರು ಶಾಮೀಲಾಗಿದ್ದಾರೆ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಆರೋಪಿಗಳ ಪತ್ತೆಗೆ ಪೊಲೀಸ್‌ ಇನ್‌ ಸ್ಪೆಕ್ಟರ್‌ ಸಂಗಮೇಶ ಈ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ನವಲಗುಂದ, ಹಾವೇರಿ, ಮಂಗಳೂರು ಇತರೆಡೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದೆ. ಆರೋಪಿಗಳು ಕಚೇರಿ ಶೌಚಾಲಯ ಕಿಂಡಿ ಮೂಲಕ ನುಗ್ಗಿ, ಸೇಫ್ಟಿ ಲಾಕರ್‌ ನ ಒಡೆದು ಹಣ ದೋಚಿದ್ದಾರೆ ಎಂದು ಅವರು ವಿವರಿಸಿದರು. ಕಚೇರಿಯಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಕೃತ್ಯ ವಿಧಾನ, ಜಾಡು ಆಧರಿಸಿ ಆರೋಪಿಗಳನ್ನು ತಂಡವು ಪತ್ತೆ ಹಚ್ಚಿದೆ. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದರು

RELATED ARTICLES
- Advertisment -
Google search engine

Most Popular