Friday, April 4, 2025
Google search engine

Homeಸ್ಥಳೀಯಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ 1.25 ಲಕ್ಷ ವಂಚನೆ

ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ 1.25 ಲಕ್ಷ ವಂಚನೆ

ಮೈಸೂರು: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಕಲಿ ಕಂಪನಿಯೊಂದು ನಂಬಿಸಿ ನಾಚನಹಳ್ಳಿಪಾಳ್ಯ ನಿವಾಸಿ ಇಸ್ಲಾಂ ಪಾಷ ಅವರಿಂದ 1.25 ಲಕ್ಷ ಪಡೆದು ವಂಚಿಸಿದೆ.

ಪಾಷಾ ಆನ್‌ ಲೈನ್ ಮೂಲಕ ನಕಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಮೊದಲು ಅವರಿಗೆ ಸ್ವಲ್ಪ ವೇತನವೂ ಪಾವತಿಯಾಗಿತ್ತು. ನಂತರ ನೀವು ಕಂಪನಿಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ಒಡ್ಡಿದ್ದು, ಇದನ್ನು ನಂಬಿದ ಪಾಷ ಅವರು ಹಂತ ಹಂತವಾಗಿ 1.25 ಲಕ್ಷವನ್ನು ಅವರ ಖಾತೆಗೆ ಹಾಕಿದ್ದಾರೆ. ನಂತರ ಅವರಿಂದ ಯಾವುದೇ ಉತ್ತರ ಬರದೆ, ಸಂಪರ್ಕಕ್ಕೂ ಸಿಕ್ಕಿಲ್ಲ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular