Sunday, April 20, 2025
Google search engine

Homeಸ್ಥಳೀಯಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿ ಆದಾಯ 1,77 ಕೋಟಿ

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿ ಆದಾಯ 1,77 ಕೋಟಿ

ನಂಜನಗೂಡು : ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ 34 ಹುಂಡಿಗಳಲ್ಲಿ 1,77 ಕೋಟಿ ಹಣ ಸಂಗ್ರಹವಾಗಿದೆ.

ದೇವಾಲಯದ ದಾಸೋಹಭವನದಲ್ಲಿ ಬುಧವಾರ ಪೊಲೀಸರ ಭದ್ರತೆಯಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಸಲಾಯಿತು.

ನಗದು 1,77,08,710 ರೂಪಾಯಿ,ಚಿನ್ನ 65 ಗ್ರಾಮ್‌,3.5 ಕೆ.ಜಿ ಬೆಳ್ಳಿ ಹಾಗೂ 64 ವಿದೇಶಿ ಕರೆನ್ಸಿಗಳು ದೊರೆತಿವೆ.

ಕೆನರಾಬ್ಯಾಂಕ್‌ ಹಾಗೂ ದೇವಾಲಯದ ಸಿಬ್ಬಂದಿ ,ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳಾ ಸದಸೆಯರು ಹುಂಡಿಯ ಹಣ ಎಣಿಕೆಯಲ್ಲಿ ಭಾಗಿಯಾಗಿದ್ದರು.

ದೇವಾಲಯದ ಇಒ ಜಗದೀಶ್‌ ಕುಮಾರ್‌, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಕೆನರಾ ಬ್ಯಾಕ್‌  ವ್ಯವಸ್ಥಾಪಕಿ ಲಕ್ಷ್ಮಿ ಉಪಸ್ಥಿತರಿದ್ದರು.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಬುಧವಾರ ಹುಂಡಿ ತೆರೆದು ಹಣ ಎಣಿಸಲಾಯಿತು.

RELATED ARTICLES
- Advertisment -
Google search engine

Most Popular