ಬಾಗಲಕೋಟೆ: ರಾಜ್ಯದ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ದಿನದ ಹೆಣ್ಣು ಮಗುವನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆಸ್ಪತ್ರೆಯಲ್ಲಿ ನರ್ಸ್ ಎಂದು ಪರಿಚಯಿಸಿಕೊಂಡ ಮಹಿಳೆ, ಮಗುವಿನ ತಾಯಿಗೆ ಕಫಾ ತೆಗೆಸಬೇಕೆಂಬ ನಾಟಕವಾಡಿ ಮಗು ಕದ್ದೊಯ್ದಿರುವ ಶಾಕಿಂಗ್ ಪ್ರಕರಣ ನಡೆದಿದೆ.
ಮಗುವನ್ನು ಕಳಕೊಂಡಿರುವ ಮಹಿಳೆಯು ಮಾಬೂಬಿ (30) ಎಂಬವರಾಗಿದ್ದು, ಕಫಾ ತೆಗೆಸಲು ಮಗುವನ್ನು ನರ್ಸ್ ಕೈಗೆ ಒಪ್ಪಿಸಿದ್ದರು. ಮಗುವನ್ನು ಕೊಂಡೊಯ್ದ ಮಹಿಳೆ ಎಷ್ಟೊತ್ತಾದರೂ ಬರಲಿಲ್ಲವೆಂದು ಅನುಮಾನಗೊಂಡ ಮನೆಯವರು ಮಗುವನ್ನು ಹುಡುಕಲು ತೊಡಗಿದರು, ಆದರೆ ಎಲ್ಲಿಯೂ ಮಗು ಪತ್ತೆಯಾಗಲಿಲ್ಲ. ಇದರಿಂದಾಗಿ ತಕ್ಷಣವೇ ನವನಗರ ಠಾಣೆಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.