Friday, April 11, 2025
Google search engine

HomeUncategorizedರಾಷ್ಟ್ರೀಯ30 ಲಕ್ಷ ಯುವಕರಿಗೆ 1 ತಿಂಗಳ ಪಿಎಫ್‌, ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ

30 ಲಕ್ಷ ಯುವಕರಿಗೆ 1 ತಿಂಗಳ ಪಿಎಫ್‌, ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಜುಲೈ 23) ಲೋಕಸಭೆಯಲ್ಲಿ 2024-2025ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದು, ಪ್ರಧಾನಮಂತ್ರಿ ಸೂರ್ಯಘರ್‌ ಉಚಿತ ವಿದ್ಯುತ್‌ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿದ ಅವರು, ಈ ಯೋಜನೆಯಿಂದ 1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್‌ ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದರು.

ಮುದ್ರಾ ಯೋಜನೆ ಸಾಲ:

ಮುದ್ರಾ ಯೋಜನೆಯಡಿಯ ಸಾಲದ 10 ಲಕ್ಷ ರೂಪಾಯಿ ಮಿತಿಯನ್ನು 20 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಯಲ್ಲಿ ಘೋಷಿಸಿದರು.

ಯುವಕರು ಉದ್ಯೋಗ ಮಾರ್ಕೆಟ್‌ ಗೆ ಪ್ರವೇಶಿಸಲು ಉತ್ತೇಜಿಸುವ ನಿಟ್ಟಿನಲ್ಲಿ 30 ಲಕ್ಷ ಯುವಕರಿಗೆ Incentives ರೂಪದಲ್ಲಿ ಒಂದು ತಿಂಗಳ ಪಿಎಫ್‌ (Provident Fund) ಅನ್ನು ನೀಡುವುದಾಗಿ ಬಜೆಟ್‌ ನಲ್ಲಿ ಘೋಷಿಸಿದೆ.

ದೇಶಾದ್ಯಂತ ಮಹಿಳಾ ಹಾಸ್ಟೆಲ್:‌

ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ದೇಶಾದ್ಯಂತ ಮಹಿಳೆಯರಿಗಾಗಿ ಮಹಿಳಾ ಹಾಸ್ಟೆಲ್‌ ಗಳನ್ನು ನಿರ್ಮಾಣ ಮಾಡುವುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದರು.

RELATED ARTICLES
- Advertisment -
Google search engine

Most Popular