ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ದೊಡ್ಡಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ನಿರ್ದೇಶಕ ಸ್ಥಾನದ ಚುನಾವಾಣೆಯಲ್ಲಿ ೧೦ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
೧೦ ಸ್ಥಾನಗಳಿಗೆ ಅ.೨೭ ಭಾನುವಾರ ನಡೆಯಬೇಕಿದ್ದ ಚುನಾವಣೆಗೆ ಒಟ್ಟು೧೩ ಮಂದಿ ನಾಮಪತ್ರ ಸಲ್ಲಿಸಿದ್ದರು ಅದರೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ನಾಮಪತ್ರ ಸಲ್ಲಿಸಿದ್ದ ಡಿ.ಎಚ್.ರಮೇಶ್ ಮತ್ತು ವಿಮಲ ಅವರು ನಾಮಪತ್ರ ವಾಪಸ್ ಪಡೆದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು ೧೩ ಸ್ಥಾನಗಳಿಗೆ ನಿಗದಿಯಾಗಿಯಾಗಿದ್ದ ಈ ಚುನಾವಣೆಯಲ್ಲಿ ಬಿಸಿಎಂ, ಎ ವರ್ಗ ಮತ್ತು ಎಸ್.ಸಿ.ಮೀಸಲು ಕ್ಷೇತ್ರಕ್ಕೆ ಯಾರು ನಾಮಪತ್ರ ಸಲ್ಲಿಸದ ಕಾರಣ ೧೦ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು ಇದರಿಂದ ನೂತನ ನಿರ್ದೇಶಕರಾಗಿ ಡಿ.ಆರ್.ನಾಗರಾಜು, ಡಿ.ಬಿ.ಸುಜೇಂದ್ರ, ಡಿ.ಕೆ.ಭರತಕುಮಾರ್, ದೇವರಾಜ ನಾಯಕ, ಡಿ.ಎನ್.ಕುಮಾರ್, ಡಿ.ಇ.ಅಪ್ಪಾಜಿಗೌಡ, ಡಿ.ಕೆ.ದಿವಾಕರ, ಅನಿತಾ,ಡಿ.ಸಿ.ವಿಶ್ವನಾಥ್, ಲಲಿತಮ್ಮ ಅವಿರೋಧವಾಗಿ ಅಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕೆ.ಆರ್.ನಗರ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್. ರವಿ ಕಾರ್ಯನಿರ್ವಹಿಸಿದರು ಸಂಘದ ಕಾರ್ಯದರ್ಶಿ ಡಿ.ಆರ್.ಶಿವಲಿಂಗೇಗೌಡ ಮತ್ತು ಹಾಲು ಪರೀಕ್ಷ ಡಿ.ಎಸ್.ರಘು ಸಹಕಾರ ನೀಡಿದರು.
ನಂತರ ನೂತನ ಆಡಳಿತ ಮಂಡಳಿಯ ನಿರ್ದೇಶಕರನ್ನು ಗ್ರಾ.ಪಂ.ಸದಸ್ಯ ಪ್ರವೀಣ್, ಗ್ರಾಮಸ್ಥರಾದ ಡಿ.ಎನ್.ಅಪ್ಪಾಜಿ, ಡಿ.ಅರ್.ನವೀನ, ಶಂಕರೇಗೌಡ, ಡಿ.ಆರ್.ಚೇತನ್, ಡಿ.ಎಸ್.ಮಧು, ಮಹೇಶ್ ಕೊಗ್ಗಣ್ಣ, ಬಾಲು, ಬೋರೇಗೌಡ, ಕಾಂತಗಡಿಯಾ, ಡಿ.ಎನ್,ರಾಜಣ್ಣ,ಡಿ.ಆರ್. ಮುತ್ತು,ಏಳನೀರು ರಾಜು, ಡಿ.ವಿ.ದಿಲೀಪ್ ಕುಮಾರ್, ಡಿ.ವಿ.ಅಶೋಕ್, ಸೋಮ, ತುಳಸಿ,ರುಕ್ಕ,ಡಿ.ಎಸ್.ಮಂಜುನಾಥ್ ಸೇರಿದಂತೆ ಮತ್ತಿತರರು ಅಭಿನಂಧಿಸಿದರು