Friday, April 18, 2025
Google search engine

Homeಅಪರಾಧಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಬೆಳಗಾವಿಯಲ್ಲಿ 10 ವಿದ್ಯಾರ್ಥಿಗಳಿಗೆ ವಂಚನೆ: ಆರೋಪಿ ಬಂಧನ

ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಬೆಳಗಾವಿಯಲ್ಲಿ 10 ವಿದ್ಯಾರ್ಥಿಗಳಿಗೆ ವಂಚನೆ: ಆರೋಪಿ ಬಂಧನ

ಬೆಳಗಾವಿ: ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಕಡಿಮೆ ಅಂಕ ಪಡೆದುಕೊಂಡವರಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಅಂತಾರಾಜ್ಯ ವಂಚಕನನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ಅರವಿಂದ್​ ಅರಗೊಂಡ ಬಂಧಿತ ವ್ಯಕ್ತಿ. ಎಂಬಿಎ ಪದವೀಧರನ್ನಾಗಿದ್ದು ಜನರಿಗೆ ವಂಚನೆ ಮಾಡುವುದನ್ನ ವೃತ್ತಿ ಮಾಡಿಕೊಂಡಿದ್ದ. ನಗರದಲ್ಲೇ 10 ಜನರಿಗೆ ಮೋಸ ಮಾಡಿದ್ದು 1 ಕೋಟಿ 8 ಲಕ್ಷ ರೂ. ವಂಚಿಸಿದ್ದಾನೆ.

ಬೆಳಗಾವಿ ಮೂಲದ ಓರ್ವ ವಿದ್ಯಾರ್ಥಿ ತಾಯಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಖೆಡ್ಡಾಗೆ ಬೀಳಿಸಲಾಗಿದೆ. ಬಂಧಿತ ಆರೋಪಿಯಿಂದ 12 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 12 ಕಂಪ್ಯೂಟರ್, ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.

2023ರಲ್ಲಿ ಬೆಳಗಾವಿಯಲ್ಲಿ ಅರವಿಂದ್ ನೀಟ್ ಕೌನ್ಸೆಲಿಂಗ್ ಸೆಂಟರ್​ ಓಪನ್ ಮಾಡಿದ್ದ. ಹತ್ತು ಜನ ಟೆಲಿ ಕಾಲರ್ಸ್​​ ನೇಮಕ ಮಾಡಿಕೊಂಡು ವಂಚಿಸುತ್ತಿದ್ದ. ಕಡಿಮೆ ಅಂಕ ಪಡೆದವರಿಗೆ ಫೋನ್ ಮೂಲಕ ಸಂಪರ್ಕಿಸಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಿಗೆ ಭರವಸೆ ನೀಡಿ ಮಕ್ಮಲ್ ಟೋಪಿ ಹಾಕಿದ್ದಾನೆ.  ಬಳಿಕ ಕಚೇರಿ ಬಂದ್ ಮಾಡಿ ಮುಂಬೈಗೆ ಪರಾರಿಯಾಗಿದ್ದಾನೆ.

ಮುಂಬೈನಲ್ಲೂ ನೀಟ್ ಕೌನ್ಸೆಲಿಂಗ್ ಸೆಂಟರ್ ಓಪನ್ ಮಾಡಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲೇ ಬಂಧಿಸಲಾಗಿದೆ. ಆ ಮೂಲಕ ಆತನಿಂದ ಮತ್ತಷ್ಟು ಜನರಿಗೆ ವಂಚನೆಯಾಗುವುದು ತಪ್ಪಿದೆ. ಆರೋಪಿ ವಿರುದ್ಧ ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಬೆಂಗಳೂರಿನಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪೋನ್, ವಿಳಾಸ, ಆಧಾರ್ ಕಾರ್ಡ್ ಬದಲಿಸುತ್ತಿದ್ದ.

RELATED ARTICLES
- Advertisment -
Google search engine

Most Popular