Saturday, April 19, 2025
Google search engine

Homeಅಪರಾಧಶಿವಮೊಗ್ಗದಲ್ಲಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ಸಿಬ್ಬಂದಿ

ಶಿವಮೊಗ್ಗದಲ್ಲಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ಸಿಬ್ಬಂದಿ

ಶಿವಮೊಗ್ಗ : ಗುತ್ತಿಗೆದಾರರೊಬ್ಬರಿಂದ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಎಸ್‌.ಆರ್‌.ಸಿದ್ದೇಶ್‌ ಎಂದು ತಿಳಿದುಬಂದಿದೆ.

ಸುನಿಲ್‌ ಕುಮಾರ್‌ ಎಂಬವರು ಮಹಾನಗರ ಪಾಲಿಕೆ ಆವರಣದ ಇಂಜಿನಿಯರ್‌ ಕಟ್ಟಡದ ಮೇಲ್ಭಾಗದಲ್ಲಿ ಶೆಡ್‌ ನಿರ್ಮಾಣಕ್ಕೆ ಗುತ್ತಿಗೆ ಪಡೆದಿದ್ದರು. 2024ರ ಡಿಸೆಂಬರ್‌ನಲ್ಲಿ ಶೆಡ್‌ ಪೂರ್ಣಗೊಂಡಿದ್ದು ಹಣ ಮಂಜೂರು ಮಾಡುವಂತೆ ಬಿಲ್‌ ಸಲ್ಲಿಸಿದ್ದರು. ಕಾಮಗಾರಿಯ ಒಟ್ಟು ಮೊತ್ತದಲ್ಲಿ 4 ಪರ್ಸೆಂಟ್‌ ಕಮಿಷನ್‌ ಹಣ ನೀಡಿದರೆ ಬಿಲ್‌ ಮಂಜೂರು ಮಾಡುವುದಾಗಿ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಸಿದ್ದೇಶ್‌ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

11 ರೂ. ಹಣಕ್ಕೆ ಸಿದ್ದೇಶ್‌ ಬೇಡಿಕೆ ಇಟ್ಟಿದ್ದು, ಗುರುವಾರ 10 ಸಾವಿರ ರೂ. ಹಣ ಪಡೆಯುವ ಸಂದರ್ಭ ದಾಳಿ ನಡೆಸಿ ಬಂಧಿಸಲಾಗಿದೆ. ಲೋಕಾಯುಕ್ತ ಎಸ್‌ಪಿ ಮಂಜುನಾಥ್‌ ಚೌಧರಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಸದ್ಯ ಸಿದ್ದೇಶ್ ನನ್ನು ವಶಕ್ಕೆ ಪಡೆದಂತಹ ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular