ಚಿತ್ರದುರ್ಗ: ಚಿತ್ರದುರ್ಗ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಟಿಸಿ ನೀಡಲು ಅಧಿಕಾರಿಗಳು ಮಕ್ಕಳಿಂದ 100 ರೂ ಲಂಚ ಪಡೆದಿರುವ ಘಟನೆ ವರದಿಯಾಗಿದೆ.
ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕಾಲೇಜು ಸಿಬ್ಬಂದಿ ಅಂಧ ದರ್ಬಾರ್ ನಡೆಸಿದ್ದಾರೆ.
ಕಾಲೇಜು ಬದಲಾವಣೆ, ಪಿಯುಸಿ ಪಾಸಾದ ವಿದ್ಯಾರ್ಥಿನಿಯರಿಗೆ ಟಿಸಿ ನೀಡಲು ಕಾಲೇಜು ಸಿಬ್ಬಂದಿ ಎಸ್.ಬಿ ಬೂದಿಹಾಳ 100 ರೂ. ಪಡೆದಿದ್ದಾರೆ.
ಟಿಸಿ ಬೇಕಾದ್ರೆ ನೂರು ರೂ. ಬೇಗ ಕೊಡ್ರಿ ಎಂದು ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದು, ಅಕ್ರಮವಾಗಿ ಲಂಚ ಪಡೆಯುತ್ತಿದ್ದನ್ನು ಕಾನೂನು ವಿದ್ಯಾರ್ಥಿಗಳ ಸಂಘದ ಸದಸ್ಯರು ವೀಡಿಯೋ ಮಾಡಿದ್ದಾರೆ.
ಕಾಲೇಜು ಸಿಬ್ಬಂದಿಗಳ ಲಂಚಾವತಾರಕ್ಕೆ ಪಾಲಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಿಬ್ಬಂದಿ ಎಸ್.ಬಿ ಬೂದಿಹಾಳನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.