ಬೆಂಗಳೂರು : ಕಂಪನಿ ಒಂದಕ್ಕೆ ಗಣಿಗಾರಿಕೆಗೆ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಯಾವ ಪರಿಸ್ಥಿತಿಯಲ್ಲೂ ಬಂಧಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ಅವರು ಹೆಚ್.ಡಿ ಕುಮಾರಸ್ವಾಮಿ ಅವರನ್ನ ಅರೆಸ್ಟ್ ಮಾಡುತ್ತೇವೆ ಅಂತ ಹೇಳಿಲ್ಲ.ಆದರೆ ಅರೆಸ್ಟ್ ಮಾಡಬೇಕಾದಂತಹ ಪರಿಸ್ಥಿತಿ ಬಂದರೆ ಅರೆಸ್ಟ್ ಮಾಡುತ್ತೇವೆ. ಯಾವುದೇ ಮುಲಾಜಿಲ್ಲದೆ ಬಂಧಿಸುತ್ತೇವೆ. ಆದರೆ ಅಂತಹ ಸನ್ನಿವೇಶ ಸದ್ಯಕ್ಕೆ ಇಲ್ಲ. ಕುಮಾರಸ್ವಾಮಿ ಪಾಪ ಭಯಪಟ್ಟಿಕೊಂಡಿದ್ದಾರೆ. ಗವರ್ನರ್ ಪ್ರಾಸಿಕ್ಯೂಷನ್ ಅನುಮತಿ ಕೊಡುತ್ತಾರೆ ಎಂದು ಭಯಪಟ್ಟಿದ್ದಾರೆ. ಅನುಮತಿ ನಾವು ಕೇಳಿಲ್ಲ ಖಾಸಗಿ ವ್ಯಕ್ತಿನು ಕೇಳಿಲ್ಲ ಅನುಮತಿ ಕೇಳಿರುವುದು SIT ಅಧಿಕಾರಿಗಳು. ಸಾಕ್ಷಿಗಳನ್ನ ಸಂಗ್ರಹಿಸಿ ಆಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಅದರ ಅರ್ಥ ಇವರ ಮೇಲೆ ಸಾಕ್ಷಿಗಳು ಇವೆ ಅಂತ ಎಂದು ತಿಳಿಸಿದರು.
ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು
ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನನ್ನ ಬಂಧಿಸೋಕೆ ೧೦೦ ಸಿದ್ದರಾಮಯ್ಯ ಬರಬೇಕು ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದರು.
ಈ ಕುರಿತು ಭಯಪಟ್ಟಿಕೊಂಡಿದ್ದಾರೆ ಎಂಬ ಸಿಎಂ ಹೇಳಿಕೆಗೆ ನಾನು ಭಯಪಟ್ಟು ಕೊಂಡಿದ್ದೇನೆ ನನ್ನ ನೋಡಿದರೆ ನಿಮಗೆ ಹಾಗೆ ಕಾಣಿಸುತ್ತದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಹೆಚ್‌ಡಿ ಕುಮಾರಸ್ವಾಮಿ ಉತ್ತರಿಸಿದರು.