ತಾಂಡವಪುರ: ನಾಲ್ಕು ವರ್ಷಗಳಲ್ಲಿ ನಂಜನಗೂಡು ತಾಲೂಕಿನ ಸಹಕಾರ ಸಂಘಗಳ ಮೂಲಕ ಜೀರೋ ಬಡ್ಡಿ ದರದಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಿಂದ ತಾಲೂಕಿಗೆ ಸುಮಾರು 108 ಕೋಟಿ ರೂಗಳ ಸಾಲವನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಸದಾನಂದ ತಿಳಿಸಿದರು.
ಅವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಮಹಿಳಾ ಸ್ವಸಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಹಕಾರ ಸಂಘಗಳ ಮೂಲಕ ಈಗಾಗಲೇ ರೈತರಿಗೆ ಜೀರೋ ಬಡ್ಡಿ ದಾದಲ್ಲಿ ಸಾಲವನ್ನು ನೀಡಲಾಗಿದ್ದು ಇಡೀ ತಾಲೂಕಿನ ರೈತರಿಗೆ ಅನುಕೂಲವಾಗಲಿ ಎಂದು ನಾವು ಮೂರು ಜನ ನಿರ್ದೇಶಕರು ಸೇರಿ ಸುಮಾರು 108 ಕೋಟಿ ರೂಗಳ ಸಾಲವನ್ನು ನಮ್ಮ ಜಿಲ್ಲಾ ಸಹಕಾರ ಸಂಘದ ಸಹಕಾರದೊಂದಿಗೆ ಗ್ರಾಮೀಣ ಭಾಗದ ಸಂಘದ ಮೂಲಕ ರೈತರಿಗೆ ಸಾಲವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಇದೆ ವೇಳೆ ಮಾತನಾಡಿದ ಮತ್ತೊಬ್ಬ ನಿರ್ದೇಶಕ ಕುರಟ್ಟಿ ಮಹೇಶ್, ರೈತರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲವನ್ನು ಧರಿಸಲಾಗುತ್ತಿದ್ದು ಸಾಲವನ್ನು ಪಡೆದ ರೈತರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಸಹಕರ ಸಂಘದವರು ನೀಡಿರುವ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಗಿರೀಶ್, ನಮ್ಮ ಸಂಗವು ಸುಮಾರು 14 ಲಕ್ಷಕ್ಕೂ ಹೆಚ್ಚು ಲಾಭದಲ್ಲಿ ನಡೆಯುತ್ತಿದ್ದು ನಮ್ಮ ಸಹಕಾರ ಸಂಘದಿಂದ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ತುಂಬಾ ಅನುಕೂಲವಾಗಿದ್ದು ಸರ್ಕಾರ ಹಾಗೂ ಸಂಘ ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ತಾವು ಆಧಿಕವಾಗಿ ಸಬಲರಾಗಿ ಸಂಘದ ಅಭಿವೃದ್ಧಿಗೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.