ಉತ್ತರಕನ್ನಡ: ಕುಮಟಾದ ಹಳ್ಕಾರ ಗ್ರಾಮದ ಮನೆಯೊಂದರ ವಿದ್ಯುತ್ ಬಿಲ್ 10963 ರೂ ಬಂದಿದ್ದು, ಮನೆಯವರು ಶಾಕ್ ಗೆ ಒಳಗಾಗಿದ್ದಾರೆ.
ಹಳ್ಕಾರ ಅರುಣ್ ಎಂಬುವವರ ಮನೆಯಲ್ಲಿ ಬಳಕೆಯಾದ 69 ಯುನಿಟ್ ಗೆ 10963ರೂ. ವಿದ್ಯುತ್ ಬಿಲ್ ಬಂದಿದೆ. ಪ್ರತಿ ತಿಂಗಳು 200ರಿಂದ 300ರೂ. ಬರುತ್ತಿದ್ದ ವಿದ್ಯುತ್ ಬಿಲ್ ಏಕಾಏಕಿ 10963 ರೂ ಬಂದಿರುವುದು ಮನೆಯವರ ಆತಂಕಕ್ಕೆ ಕಾರಣವಾಗಿದೆ.
ಬಿಲ್ ಕಂಡು ಮನೆಯವರು ಕಂಗಾಲಾಗಿದ್ದಾರೆ.