ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ತಾಲೂಕಿನ ಮುತ್ತೂರು ರಾಜೀವ ಗ್ರಾಮದ ಶ್ರೀ ಮಹಾಗಣಪತಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಡಿ.13 ರ ಶುಕ್ರವಾರ 10 ನೇ ವರ್ಷದ ಹನುಮ ಜಯಂತೋತ್ಸವ ನಡೆಯಲಿದೆ.

ಶಾಲಿವಾಹನ ಶಕ ವರ್ಷ 1946ನೇ ಶ್ರೀ ಕ್ರೋಧಿನಾಮ ಸಂವತ್ಸರದ ಮಾರ್ಗಶಿರ ಶುಕ್ಲಪಕ್ಷ ಹೇಮಂತ ಋತು ದಕ್ಷಿಣಾಯನ ಪುಣ್ಯ ಕಾಲದ ತ್ರಯೋದಶಿ ತಿಥಿ ಶುಭ ಶುಕ್ರವಾರ ಸಲ್ಲುವ ಡಿ.13 ರ ಶುಕ್ರವಾರ ಬೆಳಿಗ್ಗೆ 5.30 ಗಂಟೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಮಂಗಳವಾದ್ಯದೊಂದಿಗೆ ಕಾರ್ಯ ಸ್ಥಾನದಿಂದ 108 ಕಲಶ ಸ್ಥಾಪನೆ, ಬೆಳಿಗ್ಗೆ 8 ಗಂಟೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಗಣಪತಿ ಹೋಮ ನಂತರ ಪವಮಾನ ಹೋಮ ನಂತರ ತೀರ್ಥಪ್ರಸಾದ ವಿನಿಯೋಗ ಬಳಿಕ 11 ಗಂಟೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಶ್ರೀ ವೀರಾಂಜನೇಯ ಮೂರ್ತಿಗೆ ಕಳಸಾಭಿಷೇಕ ಮಧ್ಯಾಹ್ನ 12.45 ಗಂಟೆಯಿಂದ ಅನ್ನಸಂತರ್ಪಣೆ ಸಂಜೆ 4 ರಿಂದ ಮಂತ್ರ ವೇದಘೋಷದೊಂದಿಗೆ
ಶ್ರೀ ವೀರಾಂಜನೇಯ ಉತ್ಸವ ಮೂರ್ತಿಗೆ ಬಲಿ ಪೂಜೆ ಸಲ್ಲಿಸಿ ಸಂಜೆ 6 ಗಂಟೆಗೆ ಊರಿನ ಪ್ರಮುಖ ಬೀದಿಯಲ್ಲಿ ರಥಯಾತ್ರೆ ರಾತ್ರಿ 9 ಗಂಟೆಗೆ ದೇವರಿಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಹಾಗಣಪತಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಸಮಿತಿ (ರಿ.) ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಮತ್ತು ಗ್ರಾಮಸ್ಥರು ಕೊರಿದ್ದಾರೆ.