ಹುಣಸೂರು: ತಾಲೋಕಿನ ಬೀಜಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ 2023- 2028 ರ ಆಡಳಿತ ಮಂಡಳಿ 11 ನಿರ್ದೇಶಕ ರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ರು 11ಮಂದಿ ಆಯ್ಕೆಯಾಗಿದ್ದಾರೆ.
ಭಾನುವಾರದಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬಸವರಾಜಪ್ಪ, ತಿಮ್ಮಯ್ಯರೆಡ್ಡಿ, ಕೆಂಡರೆಡ್ಡಿ, ಶಿವಣ್ಣಗೌಡ, ಲಕ್ಷ್ಮಣ್ ರಾವ್ ಹಾಗೂ ಸಿದ್ದಶೆಟ್ಟಿ ಸೇರಿದಂತೆ 6 ಮಂದಿ ನಿರ್ದೇಶಕರು ಚುನಾವಣೆಯಲ್ಲಿ ಜಯಗಳಿಸಿದರೆ ಇನ್ನುಳಿದ 5 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದ್ದಾರೆ.
ಈ ವೇಳೆ ತಾ. ಪಂ. ಮಾಜಿಸದಸ್ಯ ರವಿ ಪ್ರಸನ್ನ, ಕಾಂಗ್ರೆಸ್ ಮುಖಂಡರಾದ ರಾಜಶೇಖರ್, ಮಲ್ಲಿಕಾರ್ಜುನಚಾರ್, ಎಂ.ಎಚ್ ಮಹದೇವ್, ರವಿ ರೆಡ್ಡಿ, ಡುಗೇಶ್,ಜನಾರ್ಧನ್, ಬಸವರಾಜೇಗೌಡ, ಗ್ರಾಮ ಪಂಚಾಯತಿ ಸದಸ್ಯರದ ಮರಿಲಿಂಗಯ್ಯ, ಚೇತನ್ ರಾವ್, ಮಂಟಿಕೊಪ್ಪಲು ದರ್ಶನ್ ಸೇರಿದಂತೆ ಇತರರು ಇದ್ದರು.