Thursday, February 5, 2026
Google search engine

Homeಅಪರಾಧಹನೂರು ತಾಲೂಕಿನ ಎರಡು ಗ್ರಾಮಗಳಲ್ಲಿ 11 ಹಸುಗಳು ನಿಗೂಢ ಸಾವು

ಹನೂರು ತಾಲೂಕಿನ ಎರಡು ಗ್ರಾಮಗಳಲ್ಲಿ 11 ಹಸುಗಳು ನಿಗೂಢ ಸಾವು

ಚಾಮರಾಜನಗರ : ಕಾಡು ಪ್ರಾಣಿಗಳ ಹಾವಳಿಹಿಂದ ಜಾನುವಾರುಗಳನ್ನು ಕಳೆದುಕೊಂಡು ಮೊದಲೇ ಕಂಗಾಲಾಗಿದ್ದ ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಮತ್ತೊಂದು ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು ನಡೆಯುತ್ತಿದ್ದು, ಕೇವಲ ಎರಡು ದಿನಗಳ ಅವಧಿಯಲ್ಲಿ ಒಂದೆರಡಲ್ಲ ಬರೋಬ್ಬರಿ 11 ಗೋವುಗಳು ಮೃತಟಪಟ್ಟಿವೆ. ಜಾನುವಾರುಗಳಿಗೆ ವಿಷ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಹಸುಗಳ ಮಾಲೀಕರು ಕಣ್ಣೀರಿಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ನಿನ್ನೆ ಮೃತಪಟ್ಟಿದ್ದವು. ಪರಶಿವ ಎಂಬವರಿಗೆ ಸೇರಿದ ಹಸುಗಳು ಜಮೀನಿನ ಪಕ್ಕದಲ್ಲಿ ಗೋವಿನ ಮೃತದೇಹಗಳು ಬಿದ್ದಿದ್ದು, ಬೆಳಗ್ಗೆ ಮೇವು ಹಾಕಲು ಜಮೀನಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ತಹಶೀಲ್ಧಾರ್ ಚೈತ್ರಾ, ಪಶು ವೈದ್ಯಾಧಿಕಾರಿ ಸಿದ್ದರಾಜು ಪರಿಶೀಲನೆ ನಡೆಸಿದ್ದರು. ಮೇಲ್ನೊಟಕ್ಕೆ ವಿಷ ಪೂರಿತ ಆಹಾರ ಅಥವಾ ವಿಷ ಪೂರಿತ ನೀರು ಸೇವಿಸಿ ಹಸುಗಳು ಮೃತಪಟ್ಟಿರುವ ಬಗ್ಗೆ ಅಂದಾಜಿಸಲಾಗಿತ್ತು. 8 ಹಸುಗಳ ಪೈಕಿ 6 ಮೃತಪಟ್ಟಿದ್ದರೆ ಇನ್ನು 2 ನಾಪತ್ತೆಯಾಗಿರುವ ವಿಚಾರ ಈ ವೇಳೆ ಗೊತ್ತಾಗಿತ್ತು.

ಘಟನೆ ಮಾಸುವ ಮುನ್ನವೇ ಇದೇ ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಇಂದು 5 ಹಸುಗಳ ನಿಗೂಢವಾಗಿ ಮೃತಪಟ್ಟಿವೆ. ಗ್ರಾಮದ ತಂಗವೇಲು ಎಂಬುವವರಿಗೆ ಸೇರಿದ ಹಸುಗಳು ಮೃತಪಟ್ಟಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹಸುಗಳನ್ನ ಕಳೆದುಕೊಂಡಿರುವ ಮಾಲೀಕರು ಕಣ್ಣೀರು ಹಾಕಿದ್ದು, ಜೀವನೊಪಾಯಕ್ಕೆ ಇದ್ದಿದ್ದೆ ಈ ಹಸುಗಳು. ಈಗ ನಮ್ಮ ಕತೆ ಏನು ಎಂದು ಭಾವುಕರಾಗಿದ್ದಾರೆ. ಹಸು ಸಾವಿಗೆ ಕಾರಣವಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular