ಮಂಡ್ಯ: ಕೆ.ಆರ್.ಎಸ್ ಡ್ಯಾಂಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಂದೇ ರಾತ್ರಿಯಲ್ಲಿ ನೀರಿನ ಮಟ್ಟ ಎರಡು ಅಡಿಗೆ ಏರಿಕೆಯಾಗಿದೆ.
110 ಅಡಿ ಗೆ ಕೆ.ಆರ್.ಎಸ್ ಡ್ಯಾಂ ನ ನೀರಿನ ಮಟ್ಟ ಏರಿಕೆಯಾಗಿದೆ.
ಡ್ಯಾಂ ಗೆ ಒಳ ಹರಿವಿನ ನೀರಿನ ಪ್ರಮಾಣ 36 ಸಾವಿರ ಕ್ಯೂಸೆಕ್ ಗೆ ಹೆಚ್ಚಾಗಿದೆ. ವ್ಯಾಪಕ ಮಳೆಯ ಕಾರಣ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಡ್ಯಾಂ ಭರ್ತಿಗೆ ಇನ್ನು ಕೇವಲ 14 ಅಡಿ ಮಾತ್ರ ಬಾಕಿ ಉಳಿದಿದೆ. ಇನ್ನೊಂದು ವಾರದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದೆ.
ಡ್ಯಾಂ ಗೆ ಹೆಚ್ಚಿನ ಪ್ರಮಾಣದ ನೀರು ಬರ್ತಿರೋದ್ರಿಂದ ರೈತರಲ್ಲಿ ಸಂಭ್ರಮ ಮನೆ ಮಾಡಿದೆ.
ಡ್ಯಾಂ ನ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 110.60 ಅಡಿ
ಒಳಹರಿವು : 36674 ಕ್ಯೂಸೆಕ್
ಹೊರಹರಿವು : 2361 ಕ್ಯೂಸೆಕ್
ಪ್ರಸ್ತುತ ನೀರಿನ ಸಂಗ್ರಹ :32.330 TMC