Friday, April 11, 2025
Google search engine

Homeರಾಜ್ಯ12692 ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ : ಅವಿನಾಶ್ ಮೆನನ್ ರಾಜೇಂದ್ರನ್

12692 ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ : ಅವಿನಾಶ್ ಮೆನನ್ ರಾಜೇಂದ್ರನ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ 12692 ಪೌರಕಾರ್ಮಿಕರನ್ನು ಅಂತಿಮವಾಗಿ ಆಯ್ಕೆ ಮಾಡಿ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ ಎಂದು ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್ ರವರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾಗಿರುವ 12692 ಪೌರಕಾರ್ಮಿಕರ ಕರಡು ಆಯ್ಕೆ ಪಟ್ಟಿಯನ್ನು ದಿನಾಂಕ: 09-10-2024 ರಂದು ಪಾಲಿಕೆ ವೆಬ್‌ಸೈಟ್ http://bbmp.gov.in/home ನಲ್ಲಿ ಪ್ರಕಟಿಸುವ ಜೊತೆಗೆ, ಆಯಾ ವಲಯಜಂಟಿ ಆಯುಕ್ತರು ರವರ ಕಛೇರಿ ಹಾಗೂ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲೂ ಸಹ ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.

ಅದರಂತೆ, ವಲಯವಾರು ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ರಮವಹಿಸಿ ಅಂತಿಮವಾಗಿ 12692 ಸಂಖ್ಯೆಯ ಪೌರಕಾರ್ಮಿಕರನ್ನು ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಅಂತಿಮ ಆಯ್ಕೆ ಪಟ್ಟಿಯನ್ನು ಆಯಾ ವಲಯ ಜಂಟಿ ಆಯುಕ್ತರು ರವರ ಕಛೇರಿ ಹಾಗೂ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ಪ್ರಕಟಿಸಲಾಗುವುದು. ಅಲ್ಲದೆ ಪಾಲಿಕೆಯ ವೆಬ್‌ಸೈಟ್ ನಲ್ಲೂ ಸಹ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾಗಿರುವವರು ಯಾವುದೇ ಆಸೆ/ ಆಮಿಷಗಳಿಗೆ ಒಳಗಾಗಬಾರದು ಹಾಗೂ ಮಧ್ಯವರ್ತಿಗಳ ಮಾತುಗಳನ್ನು ಕೇಳಿ ವಂಚನೆಗಳಿಗೆ ಒಳಗಾಗಬಾರದು. ಸದರಿ ಅಂತಿಮ ಆಯ್ಕೆ ಪಟ್ಟಿಯ ವಿವರಣೆ ಅಥವಾ ಮಾಹಿತಿಗಾಗಿ ತಮ್ಮ ವ್ಯಾಪ್ತಿಗೆ ಒಳಪಡುವ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ನೇರವಾಗಿ ಭೇಟಿ ನೀಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಅಂತಿಮ ಆಯ್ಕೆಯಾಗಿರುವ ಪೌರಕಾರ್ಮಿಕರು ಮೀಸಲಾತಿಗೆ ಅನುಗುಣವಾಗಿ ಒದಗಿಸಬೇಕಿರುವ ದಾಖಲೆಗಳು:

(1) ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಜಾತಿ ಮೀಸಲಾತಿ ಪ್ರಮಾಣ ಪತ್ರ.

(2) ಕನ್ನಡ ಮಾಧ್ಯಮ ಪ್ರಮಾಣ ಪತ್ರ.

(3) ಗ್ರಾಮೀಣ ಪ್ರಮಾಣ ಪತ್ರ.

(4) ಅಂಗವಿಕಲ ಪ್ರಮಾಣ ಪತ್ರ.

(5) ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ.

(6) ಮಾಜಿ ಸೈನಿಕ ಪ್ರಮಾಣ ಪತ್ರ.

(7) ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ.

(8) ತೃತೀಯ ಲಿಂಗ ಪ್ರಮಾಣ ಪತ್ರ.

(9) ಇತರೇ (ಅನ್ವಯಿಸುವ ದಾಖಲೆ ಮಾತ್ರ).

ಆಯ್ಕೆಯಾಗಿರುವ ಪೌರಕಾರ್ಮಿಕರು ತಮ್ಮ ಆಯ್ಕೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ವಲಯ ಮಟ್ಟದಲ್ಲಿ ರಚಿಸಲಾಗಿರುವ ದಾಖಲಾತಿ ಪರಿಶೀಲನಾ ತಂಡಗಳ ಮುಂದೆ ದಿನಾಂಕ: 25.11.2024 ರಿಂದ 30.11.2024ರ ವರೆಗೆ ವಲಯ ಮಟ್ಟದಲ್ಲಿ ನೀಡಲಾಗುವ ವೇಳಾಪಟ್ಟಿಯ ಅನುಗುಣವಾಗಿ ಮೇಲ್ಕಂಡಂತೆ ದಾಖಲೆಗಳನ್ನು ಖುದ್ದು ಹಾಜರುಪಡಿಸಬೇಕು.

RELATED ARTICLES
- Advertisment -
Google search engine

Most Popular