ಗದಗ: ನರೇಗಾ ಹಾಗೂ 15 ಹಣಕಾಸಿನ ಕಾಮಗಾರಿಯ ಸಾಮಗ್ರಿಗಳ ಬಿಲ್ ಪಾವತಿ ವಿಳಂಬವಾದ ಹಿನ್ನಲೆ ಮುಂಡರಗಿ ತಾಲ್ಲೂಕು ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಹಾಕಿ ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ 19 ಗ್ರಾಮ ಪಂಚಾಯಿತಿ ಕಾಮಗಾರಿ ಸಾಮಗ್ರಿಗಳ ಬಿಲ್ ಪಾವತಿ ಆಗಿಲ್ಲ. ಮುಂಡರಗಿ ತಾಲೂಕಿನಲ್ಲಿ 2022-23 ಒಟ್ಟು 8.50 ಕೋಟಿ ರೂ ಬಿಲ್ ಪೆಂಡಿಂಗ್ ಇದೆ. ಸಿಸಿ ರಸ್ತೆ, ಮೊರಂ ರಸ್ತೆ, ಶಾಲಾ ಮೈದಾನ, ಶಾಲಾ ಕಂಪೌಡ ದುರಸ್ತಿ, ಸ್ಮಶಾನ ಅಭಿವೃದ್ಧಿ, ಜಮೀನು ರಸ್ತೆ ನಿರ್ಮಾಣ, ವೈಯಕ್ತಿಕ ಕಾಮಗಾರಿಗಳು ಜೊತೆಗೆ ಬದು ನಿರ್ಮಾಣ ಇಂಗು ಬಚ್ಚಲು ಬಿಲ್ ನ್ನು ಸರ್ಕಾರ ಪಾವತಿಸಿಲ್ಲ.
ಸರ್ಕಾರದ ನಡೆ ಖಂಡಿಸಿ ಗ್ರಾಮ ಪಂಚಾಯತ್ ಸದಸ್ಯರು ಹೋರಾಟ ನಡೆಸುತ್ತಿದ್ದು, ಸರ್ಕಾರ ಕೂಡಲೇ ಕಾಮಗಾರಿಗಳ ಸಾಮಗ್ರಿ ಬಿಲ್ ಪೂರೈಸುವಂತೆ ಒತ್ತಾಯಿಸಿದ್ದಾರೆ.