ಗಾಝಾ: ಇಲ್ಲಿನ ಖಾನ್ ಯೂನಿಸ್ ನಗರದಲ್ಲಿ ಇಸ್ರೇಲ್ ದಾಳಿ ಮುಂದುವರಿಸಿದ್ದು, ಮಹಿಳೆಯರು ಮತ್ತು ಮಕ್ಕಳ ಸಹಿತ ಕನಿಷ್ಠ ೫೧ ಮಂದಿ ಮೃತಪಟ್ಟಿದ್ದು ೮೨ ಮಂದಿ ಗಾಯಗೊಂಡಿರುವುದಾಗಿ ಫೆಲೆಸ್ತೀನ್‌ನ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
೨೨ ತಿಂಗಳ ಮಗು ಸಹಿತ ೧೨ ಮಕ್ಕಳು ಮತ್ತು ೭ ಮಹಿಳೆಯರ ಸಹಿತ ೧೯ ಮಂದಿ ಖಾನ್ ಯೂನಿಸ್ ನಲ್ಲಿ ಸಾವನ್ನಪ್ಪಿದ್ದರೆ ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ೨೩ ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಗಳ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಖಾನ್ ಯೂನಿಸ್ನ ನೆರೆಹೊರೆಯ ಮೂರು ನಗರಗಳಿಗೆ ಇಸ್ರೇಲ್ನ ಪದಾತಿ ದಳ ಆಕ್ರಮಣ ನಡೆಸಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.