ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗೋವಾದಲ್ಲಿ ನಡೆದ ೪೦ನೇ ಮಹದೆಂ ಗೋವಾ ಸ್ಕೇಟಿಂಗ್ ಟ್ರೋಫಿಯಲ್ಲಿ ಕೆ.ಆರ್.ನಗರ ಕಿಂಗ್ಸ್ ಅಕಾಡೆಮಿಯ ೧೬ ವಿಧ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥ ಹಾಗೂ ತರಭೇತಿದಾರ ಮುಸವೀರ್ ಪಾಷ ತಿಳಿಸಿದ್ದಾರೆ.
೨೦೨೪-೨೫ನೇ ಸಾಲಿಗೆ ಜರುಗಲಿರುವ ಅಂತರರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಆಯ್ಕೆ ಸ್ಪರ್ದೇಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆ.ಆರ್.ನಗರ ಕಿಂಗ್ಸ್ ಅಕಾಡೆಮಿಯ ೧೬ ವಿಧ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಹರ್ಷ ವ್ಯಕ್ತಪಡಿಸಿ ಭತ್ತದ ನಾಡಿನ ಹೊರಹೊಮ್ಮುತ್ತಿರುವ ಯುವ ಪ್ರತಿಭೆಗಳನ್ನು ಕೆ.ಆರ್.ನಗರದ ನಾಗರೀಕರು ತಮ್ಮ ತಮ್ಮ ಮಕ್ಕಳನ್ನು ಸಹ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿ ಎಂದು ಹೇಳಿದರು.
ಕಿಂಗ್ಸ್ ಅಕಾಡೆಮಿಯ ಅಂತರರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾದ ೮ ವರ್ಷದಿಂದ ೧೭ ವರ್ಷದ ವಿಧ್ಯಾರ್ಥಿಗಳಾದ ಚಾರ್ವಿಕ್, ಪ್ರದ್ಯುಮ್ನ, ಎಂ.ಡಿ.ರಾಡೈನ್, ಅದ್ವಿತ್, ತನ್ಮಿಮಧು, ಶಶಾಂಕ್.ಎ, ವೇದಾಂತ್.ಎನ್, ಸ್ಕಂದನ್.ಎನ್, ನಂದನ್.ಕೆ.ವಿ, ಶ್ರೇಯಸ್.ಎಂ, ಅನಿಕ್‌ಮಧು, ಸೋಹನ್.ಎಂ, ಚರಣ್, ಅಝೈನ್ ಪಾಷ, ಎಂ.ಡಿ.ಜೀಶನ್, ಶ್ರೇಯಸ್.ಎಂ.ಕೆ ಈ ವಿಧ್ಯಾರ್ಥಿ ಅತ್ಯುತ್ತಮ ಪ್ರಧರ್ಶನ ನೀಡಿ ಆಯ್ಕೆಯಾಗಿ ಕೆ.ಆರ್.ನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಭಾರತ ಸ್ಕೇಟಿಂಗ್ ಆರ್.ಆರ್.ಎಸ್.ಎಫ್.ಐ ನ ಕಾರ್ಯದರ್ಶಿ ಶ್ರೀ ಅಂಬೇ ಮಾತನಾಡಿ ಇಂದಿನ ಯುವ ಪೀಳಿಗೆಯ ಮಕ್ಕಳು ಪಾಠದ ಜೊತೆಗೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯು ಸಹ ಪೋಷಕರು ಹೆಚ್ಚು ಒತ್ತನ್ನ ನೀಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿ ಕೆ.ಆರ್.ನಗರ ಕಿಂಗ್ಸ್ ಅಕಾಡೆಮಿಯ ೧೬ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮಯ ವಿಚಾರವಾಗಿದ್ದು ಇನ್ನು ಹೆಚ್ಚಿನ ಸ್ಪರ್ದೇಗಳಲ್ಲಿ ಭಾಗವಹಿಸಿ ಎಂದು ಶುಭಕೋರಿದರು.
ದೈಹಿಕ ಶಿಕ್ಷಣ ಮತ್ತು ಮನರಂಜನಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ, ಸಹಭಾಗಿತ್ವ, ಕ್ಷೇಮ, ಮತ್ತು ಸ್ಥಿತಿ ಸ್ಥಾಪಕತ್ವದ ಅನುಭವ ಹಾಗೂ ರೂಪಾಂತರದ ಬದಾಲಾವಣೆಯನ್ನು ಕ್ರೀಡೆಯು ಉಂಟುಮಾಡುತ್ತದೆ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬೇಕಾದ ಬುದ್ದಿಶಕ್ತಿ, ನೈತಿಕತೆಯನ್ನು ಅಭಿವೃದ್ದಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡುವುದು ಉತ್ತಮ.
ಮುಸವೀರ್ ಪಾಷ ಕಿಂಗ್ಸ್ ಅಕಾಡೆಮಿ ಮುಖ್ಯಸ್ಥ ಹಾಗೂ ತರಭೇತಿದಾರ ಕೆ.ಆರ್.ನಗರ