Sunday, April 20, 2025
Google search engine

Homeರಾಜ್ಯಸುದ್ದಿಜಾಲಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಆಚರಣೆ

ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಆಚರಣೆ

ರಾಮನಗರ: ವಿವೇಕಾನಂದರು ಯುವ ಜನರಿಗೆ ಮಾದರಿಯಾಗಿದ್ದು, ಎಲ್ಲರೂ ಅವರ ಸಿದ್ಧಾಂತಗಳನ್ನು ಪಾಲಿಸಬೇಕು.ಜೀವನದಲ್ಲಿಗುರಿ ಮುಖ್ಯ.ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಗುರಿ ಸಾಧಿಸುವತ್ತ ಗಮನಹರಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ ಅವರು ತಿಳಿಸಿದರು. ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಭಾರತೀಯರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಹಾಗೂ ರಾಷ್ಟ್ರೀಯಯುವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರತತ್ವ ಮತ್ತು ಆದರ್ಶಗಳು ಸದಾ ಪ್ರಸ್ತುತವಾಗಿದ್ದು, ಯುವಜನರು ಅರ್ಥೈಸಿಕೊಂಡು ಪಾಲಿಸಿದಾಗ ದೇಶಅಭಿವೃದ್ಧಿ ಪಥದಲ್ಲಿ ಸಾಗಲಿದೆ. ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ. ವಿವೇಕಾನಂದರಅಧ್ಯಾತ್ಮ, ದೇಶಭಕ್ತಿ ಹಾಗೂ ಮಾನವೀಯತೆಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಂಸ್ಕೃತ ವಿದ್ವಾನ್‌ಚಂದ್ರಶೇಖರಯ್ಯ ಮಾತನಾಡಿ, ಸಂವಿಧಾನದ ಮೌಲ್ಯಗಳನ್ನು ವಿವೇಕಾನಂದರ ಚಿಂತನೆಯಲ್ಲಿ ಕಾಣಬಹುದಾಗಿದೆ. ವಿವೇಕಾನಂದ, ಗಾಂಧೀಜಿ ಮತ್ತುಅಂಬೇಡ್ಕರ್‌ಅವರುಆಧುನಿಕ ಭಾರತದಚಿಂತನೆಯ ಪ್ರತಿಪಾದಕರಾಗಿದ್ದರು.ಧರ್ಮವುದೇಹ ಹಾಗೂ ಆತ್ಮದಂತೆ ಸಮ್ಮಿಲನಗೊಂಡಿದ್ದುಎಲ್ಲರೂಒಗ್ಗೂಡಿ ಬದುಕಬೇಕು ಎಂಬುದು ವಿವೇಕಾನಂದರ ಆಶಯವಾಗಿತ್ತು ಎಂದರು.

ವಿವೇಕಾನಂದರು ಅಸಮಾನತೆ, ಸಾಮಾಜಿಕ ಮೌಢ್ಯಗಳ ವಿರುದ್ಧಧ್ವನಿ ಎತ್ತಿದರು.ಜಾತಿ ವ್ಯವಸ್ಥೆಯಲ್ಲಿ ಹುಳುಕುಗಳ ವಿರುದ್ಧ ಅವರ ವಿವೇಕ ವಿವೇಚನಾ ಉಪನ್ಯಾಸಗಳು ಇಂದಿಗೂ ಮೌಢ್ಯ ನಿರ್ಮೂಲನೆಗೆ ಸಹಕಾರಿಯಾಗಿವೆಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಭಾರತದ ಧಾರ್ಮಿಕತೆಯ ಅಸ್ಮಿತೆಯ ಪ್ರತೀಕ.ಕಡಿಮೆ ವಯಸ್ಸಿನಲ್ಲಿಯೇ ಜಗ ಮೆಚ್ಚುವ ಸಾಧನೆ ಮಾಡಿ ಪ್ರಪಂಚದಲ್ಲಿಯೇ ಗುರುತಿಸಿಕೊಂಡಿದ್ದಾರೆ.
ಹಿರಿಯಜನಪದಗಾಯಕಆಲೂರು ನಾಗಪ್ಪ ಮಾತನಾಡಿ,ದೇಶಕಟ್ಟಲುಜೀವನ ಮುಡಿಪಾಗಿಟ್ಟಆದರ್ಶ ವ್ಯಕ್ತಿ ವಿವೇಕಾನಂದರ ವಿಚಾರಧಾರೆ ಸಮೃದ್ಧ, ಸದೃಢರಾ ನಿರ್ಮಾಣಕ್ಕೆ ಸಹಕಾರಿಯಾಗಿದೆಎಂದರು.
ಯುವ ಶಕ್ತಿ ಸಮೃದ್ಧ ಭವಿಷ್ಯದ ಸಂಕೇತವಾಗಿದ್ದುಯುವ ಸಂಪತ್ತು ಸನ್ಮಾರ್ಗದಲ್ಲಿ ಸಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು.ಯುವಜನರನ್ನುದೇಶದ ಆಸ್ತಿಯನ್ನಾಗಿಸಬೇಕು.ಸ್ವಾರ್ಥ ಮನೋಭಾವ ಬಿಟ್ಟು ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕುಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ, ಸ್ವಾಮಿ ವಿವೇಕಾನಂದರತ್ಯಾಗ ಮತ್ತು ಸಾಧನೆಯುವಕರಿಗೆಆದರ್ಶವಾಗಿದ್ದು, ಇಂದಿನ ಯುವ ಶಕ್ತಿ ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸಬೇಕುಎಂದು ತಿಳಿಸಿದರು. ದೇಶದಅಭಿವೃದ್ಧಿಯಲ್ಲಿಯುವಜನತೆಯ ಪಾತ್ರ ಮುಖ್ಯವಾಗಿದ್ದು, ಸ್ವಯಂ ಪ್ರೇರಣೆಯಿಂದ ದೇಶದ ಪ್ರಗತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದುಅವರು ಹೇಳಿದರು. ಭಾರತೀಯರೆಡ್‌ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ವಿ. ಶೇಷಾದ್ರಿಅಯ್ಯರ್, ಉಪಸಭಾಪತಿ ವಿ.ಬಾಲಕೃಷ್ಣ, ಖಜಾಂಚಿ ಎಂ.ಪರಮಶಿವಯ್ಯ, ಕಾರ್ಯದರ್ಶಿ ಎಸ್. ರುದ್ರೇಶ್ವರ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ನರೇಂದ್ರ, ಸಿಖ್ ಬತ್‌ಉಲ್ಲಾಖಾನ್, ರಾಮಕೃಷ್ಣನ್, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ಕಾಲೇಜಿನ ಉಪನ್ಯಾಸಕ ಬಿ.ಶಿವಮ್ಮ, ಸುಜತಾರತ್ನಾಕರ, ಎ.ಆರ್.ತ್ರಿವೇಣಿಇತರರು ಇದ್ದರು.

RELATED ARTICLES
- Advertisment -
Google search engine

Most Popular